"ಆರೋಗ್ಯಧಾಮ " ಯೋಗ ಚಿಕಿತ್ಸೆ ಮತ್ತು ಅರೋಗ್ಯ ಕೇಂದ್ರ ಉದ್ಘಾಟನೆ

ಉಡುಪಿ : ವೀರಹನುಮಾನ್ ರಸ್ತೆ, ಚಿಟ್ಪಾಡಿಯಲ್ಲಿರುವ "ವಸುದೈವ ಕುಟುಂಬಕಂ" ಎಂಬಲ್ಲಿ ಕೈವಲ್ಯ ಯೋಗ ಮತ್ತು ಆಯುರ್ವೇದಿಕ ಸೇವಾ ಟ್ರಸ್ಟ್ ನಲ್ಲಿ ದಿ :12-04-2026ರಂದು "ಆರೋಗ್ಯಧಾಮ" ಎಂಬ ಯೋಗ ಚಿಕಿತ್ಸೆ ಮತ್ತು ಅರೋಗ್ಯ ಕೇಂದ್ರವನ್ನು ಉಡುಪಿ ಚಿಕ್ಕಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥೆಯಾದ ಡಾ .ಅನ್ನಪೂರ್ಣ ಆಚಾರ್ಯ, ಮತ್ತು ವಸುದೈವಕುಟುಂಬಕಂ ನ ವ್ಯವಸ್ಥಾಪಕ ಟ್ರಸ್ಟಿ ಶ್ರೀಕಾಂತ್ ರಾವ್ ಕೊಡಂಚ, ಹಾಗೂ ಗೌರವ ಅಥಿತಿಗಳಾದ ಡಾ .ಸತೀಶ್ ರಾವ್ ಬಿ ಎಸ್, ಶ್ರೀಕೃಷ್ಣ ರಾವ್ ಕೊಡಂಚ ,ಡಾ .ನಿತಿನ ಕುಮಾರ್ ಜೆ ಪಾಟೀಲ, ಡಾ. ಕಿರಣ್ ವಿ ಎಸ್ ಆಚಾರ್ಯ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು