ಉಡುಪಿ : ಭೀಮಯಾನ ರ‍್ಯಾಲಿ

ಮಲ್ಪೆ: ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಯುವಸೇನೆ, ದಸಂಸ, ಎಸ್.ಸಿ,ಎಸ್.ಟಿ ಗುತ್ತಿಗೆದಾರರ ಸಂಘ ಮತ್ತು ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ ಭೀಮಯಾನ ರ‍್ಯಾಲಿಯಲ್ಲಿ ನಗರದ ಊದ್ದಕ್ಕೂ ನೀಲಿ ಭಾವುಟದ ಮೆರುಗು ತುಂಬಿತ್ತು. 

   ಅಂಬೇಡ್ಕರ್‌ರವರ ಭಾವಚಿತ್ರವನ್ನು ಸಿಂಗಾರಗೊoಡ ರಥದ ಜೊತೆಗೆ ಚೆಂಡೆ, ನಾಸಿಕ್‌ ಬ್ಯಾಡ್,ವಿವಿಧ ಬಗೆಯ ಟ್ಯಾಬ್ಲೋವಾಹನಗಳು ಸೇರಿ ಸುಮಾರು ಮುನ್ನೂರನ್ನು ಹೆಚ್ಚು ಬೈಕ್,ಕಾರು,ರಿಕ್ಷಾ ಮತ್ತು ಜೀಬುಗಳಿಗೆ ನೀಲಿ ಭಾವಟಗಳನ್ನು ಕಟ್ಟಿಕೊಂಡು ಮಲ್ಪೆಯಿಂದ ಉಡುಪಿ ನಗರದ ಬೀದಿ ಬೀದಿಯಲ್ಲಿ ಸಂಚಾರಿಸಿ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಸಮಾಪ್ತಿಗೊಂಡಿತ್ತು.     

  ಮಲ್ಪೆಯ ವಡಭಾಂಡೇಶ್ವರದಿAದ ಈ ಭೀಮಯಾನ ವಾಹನ ರ‍್ಯಾಲಿಯನ್ನು ದಲಿತ ಚಿಂತಕ ಹಾಗೂ ಜನಪರಹೋರಾಟಗಾರ ಜಯನ್ ಮಲ್ಪೆ, ಸಂಧ್ಯಾ ತಿಲಕ್, ಸಮಾಜ ಸೇವಕ ಶಶಿಧರ್, ಮಲ್ಪೆ ಠಾಣಾಧಿಕಾರಿ ಅನಿಲ್ ಕುಮಾರ್, ಬಾಲಕೃಷ್ಣ, ನಿವೃತ್ತ ಪ್ರಿನ್ಸಿಪಾಲ್ ಜಗದೀಶ್ ಪರ್ಕಳ ಹರೀಶ್ ಸಲ್ಯಾನ್ ಮುಂತ್ತಾದವರು ಭಾಗವಹಿಸಿದ್ದರು.    

 ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ,ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ವಾಸುದೇವ ಮುದ್ದೂರು, ಎಸ್.ಸಿ.ಎಸ್.ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು,ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘಸ ಈಶ್ವರ ಮತ್ತು ಶಿವಕುಮಾರ್ ಪರ್ಕಳ ಉಪಸ್ಥಿತರಿದ್ದರು.

   ದಲಿತ ಮುಖಂಡರಾದ ದಯಾಕರ ಮಲ್ಪೆ,ಪ್ರಸಾದ್ ನೆರ್ಗಿ,ಸುಶೀಲ್ ಕೊಡವೂರು, ಸಂತೋಷ್ ಕಪ್ಪೆಟ್ಟು, ಕಮಲಾಕ್ಷ ಚೇರ್ಕಾಡಿ,ನಾರಾಯಣ ಪರ್ಕಳ,ಪ್ರಮೀಣ್ ಕದ್ರಿಪದವು, ಉಮೇಶ್ ಬೈಂದೂರು, ಭಾಸ್ಕರ್ ನಾಯ್ಕ. ಆನಂದ ಬೆಳ್ಳಾರೆ, ರಾಮ ನಾಯ್ಕ, ಲಕ್ಷ್ಮಣ ಬೈಂದೂರು, ರಾಮ ಮೈಯಾಡಿ, ನವೀನ ಬನ್ನಂಜೆ ಮುಂತ್ತಾದವರು ಭಾಗವಹಿಸಿದ್ದರು. 

   ಸಮರೋಪ ಸಮಾರಂಭದಲ್ಲಿ ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ,ಸಮಾಜಸೇವಕ ಕೃಷ್ಣಮೂರ್ತಿ,ರಮೇಶ್ ಕಾಂಚನ್,ಅಮೃತ ಕೃಷ್ಣಮೂರ್ತಿ, ಶೇಖರ ಪೂಜಾರಿ, ರಾಘವೇಂದ್ರ ನಾಯ್ಕ,ಮುಂತ್ತಾದವರು ಭಾಗವಹಿಸಿದ್ದರು.

   ದಯಾಕರ ಸ್ವಾಗತಿಸಿ,ಸುಕೇಶ್ ನಿಟ್ಟೂರು ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು