ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿ ಆಸಾಮಿ ಮಹಮ್ಮದ್ ಅಲ್ಫಾಜ್ 25 ವರ್ಷ, ತಂದೆ ಮೊಹಮ್ಮದ್ ಅಶ್ರಫ್, ಮನೆ ನಂಬ್ರ 2/41–18 ಜನತಾ ಕಾಲೋನಿ, ಅರೆಹೊಳೆ ಕ್ರಾಸ್ ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಹಾಲಿ ವಾಸ: ಸಿದ್ದನಾಯ್ಕನ ರಸ್ತೆ, ರಾಮ ಮಂದಿರದ ಬಳಿ, ಕುಂದಾಪುರ ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆರವರ ವರದಿಯ ಮೇರೆಗೆ ಮಾನ್ಯ ಜಿಲ್ಲಾ ದಂಡಾಧಿಕಾರಿಯವರು ಹಾಗೂ ಜಿಲ್ಲಾಧಿಕಾರಿಯವರು, ಉಡುಪಿ ಜಿಲ್ಲೆ, ಉಡುಪಿರವರು ದಿನಾಂಕ 24-04-2026 ರಂದು ಆದೇಶ ಹೊರಡಿಸಿರುತ್ತಾರೆ.
ಗೂಂಡಾ ಆಸಾಮಿಯ ವಿರುದ್ದ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆ ಸೇರಿದಂತೆ ಕೊಲೆಯತ್ನ-2, ದರೋಡೆ-1, ದರೋಡೆ ಯತ್ನ-1, ಹಲ್ಲೆ-1, ಅಕ್ರಮ ಕೂಟ-2, ಅಪಹರಣ-1, ಮಾದಕ ವಸ್ತು ಮಾರಾಟ-1, ಹಾಗೂ ಇತರ ಪ್ರಕರಣ-1 ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 1 ಪ್ರಕರಣ ಖುಲಾಸೆ, 8 ಪ್ರಕರಣ ನ್ಯಾಯಾಲಯ ವಿಚಾರಣೆ, ಉಳಿದ ಒಂದು ಪ್ರಕರಣ ತನಿಖೆಯಲ್ಲಿರುತ್ತದೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.

0 ಕಾಮೆಂಟ್‌ಗಳು