ಉಡುಪಿ : ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಎಂ.ಕಾಂ. ವಿಭಾಗ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ಮ್ಯಾನೇಜ್‌ಮೆಂಟ್ ಫೆಸ್ಟ್ 'ಲಕ್ಷ್ಯ-2026' ಇದರ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಪಿ. ಜಿ ಸಭಾಂಗಣದಲ್ಲಿ ನಡೆಯಿತು.
ಮಹಿಳಾ ಉದ್ಯಮಿ ಮತ್ತು ಫುಡ್ ಬ್ಲಾಗರ್ ಆದ ರೋವೆನಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲೊಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ ಮಾತ್ರ ಸಾಲದು ಆಸಕ್ತಿ, ಶೃದ್ಧೆ, ಧೈರ್ಯ ಮತ್ತು ಸೃಜನಶೀಲತೆಯಿಂದ ಗುರಿಯನ್ನು ತಲುಪಲು ಸತತ ಪ್ರಯತ್ನಗಳು ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಏರ್ಪಡಿಸಿದ ಫುಡ್ ಸ್ಟಾಲ್‌ಗಳನ್ನು ಉದ್ಘಾಟಿಸಿದ ಮುಖ್ಯ ಅತಿಥಿಗಳಾದ ಅನಿರುದ್ಧ್ ಎಂಟರ್ ಪ್ರೈಸ್ ನ ನಿರ್ದೇಶಕಿ ಶ್ರೀಮತಿ ಮಲ್ಲಿಕಾ ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳು ಇದೆ. ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಆಯ್ದುಕೊಂಡು ಅದರಲ್ಲಿ ಶ್ರಮ ಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋಜನ್ ಕೆ. ಜಿ ಇವರು ಕಾರ್ಯಕ್ರಮದ ಆಯೋಜನೆಯಲ್ಲಿ ವಿದ್ಯಾರ್ಥಿನಿಯ ಆತ್ಮವಿಶ್ವಾಸ, ನಾಯಕತ್ವದ ಗುಣಗಳು, ದೃಢತೆ ಹಾಗೂ ಸಾಮರ್ಥ್ಯವನ್ನು ಕೊಂಡಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣ ಭಟ್, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ, ಎಂ.ಕಾಂ. ವಿಭಾಗದ ಮುಖ್ಯಸ್ಥರಾದ ಡಾ. ವಾರಿಜ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸ್ನಾತಕ ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತೀರ್ಪುಗಾರರಾಗಿ ಶ್ರೀ ಶರತ್ ಕುಮಾರ್, ಶ್ರೀ ದಿನೇಶ್, ಕು. ರೇಣುಕಾ, ಕು. ವರ್ಷಿಣಿ, ಕು. ಗೌರಿ, ಡಾ. ಶಾಹಿದಾ ಜಹಾನ್, ಶ್ರೀಮತಿ ಶ್ವೇತಾ, ಶ್ರೀಮತಿ ಕಾವ್ಯ, ಡಾ. ಸ್ನೇಹ ಹೀರೆಮಠ, ಶ್ರೀ ಮನೋಜ್, ಶ್ರೀಮತಿ ತ್ರಿವೇಣಿ, ಶ್ರೀ ಸಂತೋಷ್, ಶ್ರೀ ಕೃಷ್ಣರಾಜ್ ಭಟ್, ಶೀ ಸಚ್ಚೇಂದ್ರ, ಶ್ರೀಮತಿ ತ್ರಿವೇಣಿ, ಡಾ. ಅಭಿಷೇಕ್ ಭಾರದ್ವಾಜ್ ಆಗಮಿಸಿದ್ದರು.
“ಲಕ್ಷ್ಯ-2026” ರ ಸಂಯೋಜಕರಾದ ಡಾ. ಅಬ್ದುಲ್ ರಜಾಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಘಟನೆಯಲ್ಲಿ ಶ್ರೀಮತಿ ಸೋನಿಯ ನೊರಾಹ್ನ, ಶ್ರೀಮತಿ ಶಶಿಕಲಾ, ಶ್ರೀಮತಿ ಸುಷ್ಮಾ, ಶ್ರೀಮತಿ ಸಂಧ್ಯಾ ಸಹಕರಿಸಿದರು.
ಕಾಲೇಜಿನ ಎಂ.ಕಾಂ ಮತ್ತು ಬಿ.ಕಾಂ. ವಿಧ್ಯಾರ್ಥಿಗಳು ಇರಿಸಿದ ವಿವಿಧ ಅಂಗಡಿ, ಸ್ಟಾಲ್ ಗಳು ವಿಶೇಷವಾಗಿ ಗಮನ ಸೆಳೆಯಿತು.
ಎಂ.ಕಾಂ. ವಿದ್ಯಾರ್ಥಿನಿಯರಾದ ಕು. ಭಾರ್ಗವಿ ಸ್ವಾಗತಿಸಿ, ಕು. ರೀಜಾ ವಂದಿಸಿದರು. ಕು. ಆಲಿಷಾ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು