ಪಿರ್ಯಾದಿ ಸುಧಿರ.ಪಿ.ಎ, ದಿ.ಅಹಮ್ಮದ ಕುಟ್ಟಿ ವಾಸ: ಪುಜಿತರಹ ಹೌಸ್ ಪಾಲಪಿಲ್ಲಿ ಚಿಮ್ಮಣ್ಣ ಎಸ್ಟೇಟ್ ಪುರಂದರ ಪಿಲ್ಲಿ ತ್ರಿಶೂರ ಜಿಲ್ಲೆ, ಕೇರಳ ರವರು ಅವರ ಕೆಲಸಗಾರ ರತೀಶ.ಕೆ.ಟಿ ರವರೊಂದಿಗೆ ದಿನಾಂಕ:28/02/2022 ರಂದು ಸಂಜೆ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ತೊಟದಲ್ಲಿ ಕೆಲಸ ಮಾಡಿಕೊಂಡಿರುವ ಸಜೀಕುಮಾರ ರವರ ಹುಟ್ಟುಹಬ್ಬಕ್ಕೆ ಬಂದಿದ್ದು ಅದೇ ದಿನ ರಾತ್ರಿ ಫಿರ್ಯಾದಿದಾರರು ಮತ್ತು ರತೀಶ್.ಕೆ.ಟಿ ರವರು ಜೊತೆಗೆ ಮದ್ಯಪಾನ ಮಾಡಿದ್ದು. ಫಿರ್ಯಾದಿದಾರರು ರತೀಶ್.ಕೆ.ಟಿ ರವರಿಗೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಇಲ್ಲಿ ನೋಡು ಅಜಿತ್ ಅಗಸ್ಟಿನ್ ರವರ ಕೆಲಸಗಾರರು ಎಷ್ಟು ಒಳ್ಳೇಯ ರೀತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಾರೆ ನೀನು ಮುಂದಕ್ಕೆ ಸರಿಯಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವಂತೆ ತಿಳಿಸಿದಾಗ ನಶೆಯಲ್ಲಿದ್ದ ರತೀಶ್.ಕೆ.ಟಿ ರವರು ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ನೀನು ಸುಳ್ಳು ಹೇಳುತ್ತಿಯಾ ಎಂದು ಬೈದಿರುತ್ತಾರೆ ಆಗ ಅವರಿಬ್ಬರ ಮದ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಅವರಿಬ್ಬರ ನಡುವೆ ಉರುಳಾಟವಾದಾಗ ಫಿರ್ಯಾದಿದಾರರ ಕೈಬೆರಳು ರತೀಶ್.ಕೆ.ಟಿ ರವರ ಎಡಕಣ್ಣಿಗೆ ತಾಗಿರುತ್ತದೆ. ಆಗ ಅಲ್ಲಿದ್ದವರು ಜಗಳವನ್ನು ಬಿಡಿಸಿರುತ್ತಾರೆ. ಇದೇ ವಿಚಾರದಲ್ಲಿ ಅಪಾದಿತ ರತೀಶ್.ಕೆ.ಟಿ ರವರು ಫಿರ್ಯಾದಿದಾರರ ಮೇಲೆ ದ್ವೇಷಗೊಂಡು ದಿನಾಂಕ:02/03/2022 ರಂದು ಬೆಳಗಿನ ಜಾವ ಸಮಯ ಸುಮಾರು 01:00 ಗಂಟೆಗೆ ಪಿರ್ಯಾದಿದಾರರು ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ಕೆಲಸದವರು ಮಲಗುವ ಮೆಟ್ಟಿಲು ಬಳಿ ಮಲಗಿರುವಾಗ ಅವರನ್ನು ಕೊಲ್ಲುವ ಉದ್ದೇಶದಿಂದ ಅಪಾದಿತನು ಯಾವುದೋ ಬಿಸಿ ಇರುವ ಕೆಮಿಕಲ್ ನ್ನು ಪಿರ್ಯಾದಿದಾರರ ದೇಹ ಮತ್ತು ಮುಖ ಹಾಗೂ ಎದೆಯ ಮೇಲೆ ಎರಚಿ ಕೊಲೆಗೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ
09/2022 ಕಲಂ:,326(A),
307,504,506 ಐಪಿಸಿ ಯಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಅಂದಿನ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಟಿ.ಎಮ್, ನಂತರದಲ್ಲಿ ತನಿಖೆ ಕೈಗೊಂಡ ಸುದರ್ಶನ ದೊಡಮನಿ, ಪೊಲೀಸ್ ಉಪ ನಿರೀಕ್ಷಕರು ಹೆಬ್ರಿ ಪೊಲೀಸ್ ಠಾಣೆ ಇವರು ಪ್ರಕರಣ ತನಿಖೆಯನ್ನು ಪೂರ್ಣಗೊಳಿಸಿ, ಕೃತ್ಯಕ್ಕೆ ಆರೋಪಿ ಮತ್ತು ಪಿರ್ಯಾದಿದಾರರ ಮಧ್ಯ ರಬ್ಬರ್ ಟೈಪಿಂಗ್ ವಿಷಯದಲ್ಲಿ ಗಲಾಟೆ ನಡೆದು ಕೃತ್ಯ ಮಾಡಿದ ಆರೋಪಿಯಾದ ರತೀಶ್ ಕೆ ಟಿ,(42) ತಂದೆ: ತುಳಸಿಧರನ್, ಕಲ್ಲಿಂಗಳ್, ತಾಳಿಪುರಂ, ಕಣ್ಣೂರು, ಕೇರಳ ಯವರ ವಿರುಧ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ದಿನಾಂಕ 07/04/2026 ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ (ಸಂಚಾರಿ ಪೀಠ ಕಾರ್ಕಳ) ಇದರ ಎಸ್ ಸಿ. ನಂಬ್ರ: 13/22 ರಲ್ಲಿ ತೀರ್ಪು ನೀಡಿ, ದಿನಾಂಕ 28/04/2026 ರಂದು ತನಿಖೆ ಹಾಗೂ ಸಾಕ್ಷಾಧಾರಗಳ ಮೇರೆಗೆ ಅಂತಿಮ ತೀರ್ಪು ನೀಡಿದ್ದು, ಆರೋಪಿಯಾದ ರತೀಶ್ ಕೆ ಟಿ ಯವರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30,000 ಸಾವಿರ ಜುಲ್ಮಾನೆ ದಂಡ ವಿಧಿಸಲಾಗಿರುತ್ತದೆ.
ಆರೋಪಿಯು ಪ್ರಸ್ತುತ ಹಿರಿಯಡ್ಕ ಕಾರಾಗೃಹ ದಲ್ಲಿರುತ್ತಾರೆ.

0 ಕಾಮೆಂಟ್‌ಗಳು