ಫಾರ್ಮ ಫ್ರೆಂಡ್ಸ್ ಉಡುಪಿ ವೈದ್ಯಕೀಯ ಪ್ರತಿನಿಧಿಗಳ 10ನೇ ವರ್ಷದ ಫಾರ್ಮ ಟ್ರೋಫಿ 2026

ಉಡುಪಿ ಫಾರ್ಮ ಫ್ರೆಂಡ್ಸ್ ಉಡುಪಿ ವೈದ್ಯಕೀಯ ಪ್ರತಿನಿಧಿಗಳ 10ನೇ ವರ್ಷದ ಫಾರ್ಮ ಟ್ರೋಫಿ 2026 ನಾಕೌಟ್ ಮಾದರಿಯ ಕ್ರಿಕೆಟ್ ಪಂದ್ಯಕೂಟ ದೊಡ್ಡನಗುಡ್ಡೆ ಮೈದಾನದಲ್ಲಿ ಎ.26 ಆದಿತ್ಯವಾರ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಹಿರಿಯ ವೈದ್ಯಕೀಯ ಪ್ರತಿನಿಧಿಗಳಾದ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ವೆಂಕಟೇಶ್ ಭಟ್ ಚೇಂಪಿ ಮತ್ತು ಭರತ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು' ವೃದ್ಧಿ ಫಾರ್ಮ ಮಾಲಕರಾದ ರಾಧಾಕೃಷ್ಣ ಭಟ್, ಹಿರಿಯ ವೈದ್ಯಕೀಯ ಪ್ರತಿನಿಧಿ ಅಶೋಕ್ ಶೆಟ್ಟಿ, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಫಾರ್ಮ ಫ್ರೆಂಡ್ಸ್ ಅಧ್ಯಕ್ಷರಾದ ಸುಧೀರ್ ಶೇಟ್ ವಿಜಯ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಫೈನಲ್ ಪಂದ್ಯಾಟದಲ್ಲಿ ಶ್ರೀರಾಮ್ ಕ್ರಿಕೆಟರ್ಸ್ ಮಂಗಳೂರು ತಂಡ ಚಾಂಪಿಯನ್ ಆಗಿ ಮೂಡಿ ಬಂತು ಅದೇ ರೀತಿ ಜೈ ಮಾರುತಿ ಕ್ರಿಕೆಟಸ್೯ ರನ್ನನ್ ಪ್ರಶಸ್ತಿ ಪಡೆದುಕೊಂಡಿತು ಅದೇ ರೀತಿ ವಿವಿಧ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶಶಿ ಕಡಿಯಾಳಿ ವೀಕ್ಷಕ ವಿವರಣೆ ನೀಡಿದರು. ಶ್ರೀನಾಥ್ ಕೋಟ, ಮಂಜುನಾಥ್ ಕಾರಂತ್, ಚಂದ್ರಶೇಖರ್ ಆಚಾರ್ಯ, ಸೇರಿದಂತೆ ಫಾರ್ಮ ಫ್ರೆಂಡ್ಸ್ ತಂಡದ ಸದಸ್ಯರು ಸಹಕರಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು