ಮಂಗಳ ಸ್ವಾಸ್ಥ್ಯ ಸೇವಾ ಯಾತ್ರೆ ೩.೦ ಆರೋಗ್ಯ ಸೇವೆಯ ಸಮಾರೋಪ ಸಮಾರ೦ಭ

 

ನ್ಯಾಷನಲ್ ಮೆಡಿಕೋಸ್ ಸ೦ಸ್ಥೆ(ಓಒಔ), ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ ಮತ್ತು ಮ೦ಗಳೂರು, ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ, ಮ೦ಗಳೂರು,  ಯೇನಪೋಯ ವೈದ್ಯಕೀಯ ಕಾಲೇಜು ಮ೦ಗಳೂರು, ಕಣಚೂರು ಆಸ್ಪತ್ರೆ ಮತ್ತು ಸ೦ಶೋಧನಾ ಕೇ೦ದ್ರ, ಮ೦ಗಳೂರು ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ  ಕಾಲೇಜಿನ ಸಹಯೋಗದೊ೦ದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯ೦ತ ಮ೦ಗಳ ಸ್ವಾಸ್ಥ÷್ಯ ಸೇವಾ ಯಾತ್ರೆ ೩.೦ ರ ಅ೦ಗವಾಗಿ ವ್ಯಾಪಕವಾದ ಆರೋಗ್ಯ ಸೇವೆಯ ಸಮಾರೋಪ ಸಮಾರ೦ಭವು ಮ೦ಗಳೂರಿನ ಸ೦ಘನಿಕೇತನ ಹಾಲ್‌ನಲ್ಲಿ ನಡೆಯಿತು. ಈ ಮಹತ್ವದ ಕಾರ್ಯಕ್ಕೆ ಒಖPಐ,  ಸೇವಾ ಭಾರತಿ ಮತ್ತು ಏSS ಮ೦ಗಳೂರು ಸ೦ಸ್ಥೆಗಳು ಸಹಯೋಗ ನೀಡಿದವು. 

ಮಾರ್ಚ್ ೨೯ರ೦ದು ಈ ಅ೦ಗವಾಗಿ ಉಡುಪಿ  ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ೩೦ ಕಡೆಗಳಲ್ಲಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಹಾಗೂ ೫ ವಿಶೇಷ ಶಿಬಿರಗಳನ್ನು ಆಯೋಜಿಸಲಾಯಿತು. ೧೬೦೦ ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿ ಉಚಿತ ಔಷಧಿ, ಕನ್ನಡಕಗಳು ಮತ್ತು ಕಣ್ಣಿನ ಶಸ್ತç ಚಿಕಿತ್ಸೆಗಳನ್ನು ಒದಗಿಸಲಾಯಿತು. ವಿಶೇಷವಾಗಿ ದೃಷ್ಟಿ ನಷ್ಟ, ಮಕ್ಕಳಲ್ಲಿ ಪೌಷ್ಟಿಕಾ೦ಶದ ಕೊರತೆ, ಹಿರಿಯರಲ್ಲಿ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ೦ತಹ ಸಮಸ್ಯೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಯಿತು.

ಪ್ರಸಾದ್ ನೇತ್ರಾಲಯವು ನಾಶನಲ್ ಮೆಡಿಕೋಸ್ ಸ೦ಸ್ಥೆಯೊ೦ದಿಗೆ ನಿರ೦ತರ ನೇತ್ರ ಶಿಬಿರಗಳನ್ನು ನಡೆಸುತ್ತಿರುವ ಭಾಗವಾಗಿ ಸಾÈಬ್ರಕಟ್ಟೆ, ಕ೦ಬದಕೋಣೆ ಮತ್ತು ಬಾರ್ಕೂರಿನಲ್ಲಿ ಬೃಹತ್ ನೇತ್ರ ಶಿಬಿರಗಳು ಮಾರ್ಚ್ ೨೯ ರ೦ದು ನಡೆದವು. ೩೭೫ ಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸಿ ೧೯೦ ಜನರಿಗೆ ಉಚಿತ ಕನ್ನಡಕ ವಿರತಣೆಗೆ ಆಯ್ಕೆ ಮಾಡಲಾಯಿತು. ಹಾಗೂ ೪೧ ರೋಗಿಗಳನ್ನು ಪೊರೆ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.  

ಸಮಾರೋಪ ಸಮಾರ೦ಭದಲ್ಲಿ ನ್ಯಾಷನಲ್ ಮೆಡಿಕೋಸ್ ಸ೦ಸ್ಥೆ ಇದರ ಮ೦ಗಳೂರು ಮತ್ತು ಉಡುಪಿ ವಿಭಾಗದ ಮುಖ್ಯಸ್ಥ ಹಾಗೂ  ಮ೦ಗಳ ಸ್ವಾಸ್ಥ್ಯ ಸೇವಾ ಯಾತ್ರೆ ೩.೦ ರ ಪೋಷಕ ಹಾಗೂ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಆರ್ ಎಸ್ ಎಸ್ ಸ೦ಘಚಾಲಕ್ ಡಾ. ಪಿ. ವಾಮನ ಶೆಣೈ, ಮ೦ಗಳಾ ಆಸ್ಪತ್ರೆಯ ನಿರ್ದೇಶಕ ಡಾ. ಗಣಪತಿ ಭಟ್, ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಾದೀಶ್ ಭಟ್ ಮತ್ತು ಯೆನೆಪೋಯಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಮಕ್ಕಳ ಶಸ್ತçಚಿಕಿತ್ಸಕ ಹಾಗೂ ಮೂತ್ರ ಶಾಸ್ತ್ರಜ್ಞ ಡಾ. ಸುಹಿತಾ ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. 

೧೦೦ ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಮು೦ದಿನ ಪೀಳಿಗೆಯ ಆರೋಗ್ಯ ವೃತ್ತಿಪರರ ಸಹಾನುಭೂತಿ, ಸಮರ್ಪಣೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು