ದಿನಾಂಕ 05/04/2026 ರಂದು ಅಮಾಸೆಬೈಲು ಪೊಲೀಸ್ ಠಾಣಾ ಪಿಎಸ್ಐ ಅಶೋಕ್ ಕುಮಾರ್ ಇವರು ಠಾಣಾ ವ್ಯಾಪಿಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ, ಹೊಸಂಗಡಿ ಚೆಕ್ ಪೋಸ್ಟ್ನಲ್ಲಿ ರಾತ್ರಿ ಕರ್ತವ್ಯದಲ್ಲಿರುವ ಸಿಬ್ಬಂಧಿಯವರು ಬೆಳಗ್ಗೆ 05;00 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ, KA 25- AB 6246 ನೇ TATA Intra ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿ ಅದರಲ್ಲಿ ಎರಡು ಎತ್ತುಗಳನ್ನು( ಗಂಡು ದನಗಳು) ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಿಸಲಾಗಿ ಸದ್ರಿ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ವಧೆಗಾಗಿ ಕೊಂಡು ಹೋಗುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿರುತ್ತಾರೆ. ಮೂರು ಎತ್ತುಗಳ ಅಂದಾಜು ಮೌಲ್ಯ 1,00,000/- ಮತ್ತು TATA Intra ವಾಹನದ ಮೌಲ್ಯ 04 ಲಕ್ಷ ರೂಪಾಯಿಗಳಾಗಬಹುದು. ಸದ್ರಿ TATA Intra ವಾಹನದ ಹಿಂದುಗಡೆಯಿಂದ KA 47 A 6169ನೇ ನಂಬ್ರದ ಬಿಳಿ ಬಣ್ಣದ TOYOTA ETIOS (ಅಂದಾಜು ಮೌಲ್ಯ-5,00,000) ಕಾರೊಂದು ಹುಲಿಕಲ್ ಕಡೆಯಿಂದ ಹೊಸಂಗಡಿ ಕಡೆಗೆ ಬರುತ್ತಿದ್ದು ಸದ್ರಿ ಕಾರು ಅಕ್ರಮ ಜಾನುವಾರು ಸಾಗಾಟಕ್ಕೆ ಬೆಂಗಾವಲಾಗಿ ಬಂದ ಕಾರು ಎಂಬುದಾಗಿ ಸಂಶಯಗೊಂಡು, ಸದ್ರಿ ಕಾರನ್ನು ನಿಲ್ಲಿಸಲಾಗಿ ಕಾರು ಚಾಲಕನು ಕಾರು ನಿಲ್ಲಿಸಿದ್ದು ಕಾರಿನಿಂದ ಕಾರು ಚಾಲಕ ಮತ್ತೊಬ್ಬ ವ್ಯಕ್ತಿ ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ರಿ ಜಾನುವಾರು ಅವುಗಳನ್ನು ತಂದ ವಾಹನ ಸಮೇತ ವಾಹನದಲ್ಲಿದ್ದವರನ್ನು ವಶಕ್ಕೆ ಪಡಕೊಂಡು ಅಮಾಸೆಬೈಲು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 08/2026 ಕಲಂ: ಕಲಂ 4̧ ̧5 7̧ 12̧ prevention of Cow Slaughter and Preservation of Cattle Act 2020 & 11(1)(d) Prevention of Cruelty to animal Act & 66(1)R/W 192 (A) IMV Act ಪ್ರಕರಣ ದಾಖಲಿಸಿದ್ದು, ಪ್ರಕರಣದ ಆರೋಪಿಗಳಾದ 1} ಮುಸ್ತಾಕ್ ಹುಸೇನ್ ಸಾಬ್ ನದಾಫ್ ಪ್ರಾಯ 29 ವರ್ಷ ತಂದೆ: ಹುಸೇನ್ ಸಾಬ್ ವಾಸ: KSRTC ಡಿಪ್ಪೊ ಬಳಿ ಬಾಗ್ಯನಗರ ರಾಮದುರ್ಗಾ ಬೆಳಗಾಂ ಜಿಲ್ಲೆ 2} ಸಲೀಂ ಹುಸೇನ್ ಸಾಬ್ ನದಾಫ್ ಪ್ರಾಯ 33 ವರ್ಷ ತಂದೆ: ಹುಸೇನ್ ಸಾಬ್ ವಾಸ: KSRTC ಡಿಪ್ಪೊ ಬಳಿ ಭಾಗ್ಯನಗರ ರಾಮದುರ್ಗಾ ಬೆಳಗಾಂ ಜಿಲ್ಲೆ 3} ನದೀಂ ಅಬ್ದುಲ್ ಖಾದರ್ ಪ್ರಾಯ 34 ವರ್ಷ ತಂದೆ: ಕೆ ಟಿ ಅಬ್ದುಲ್ ಖಾದರ್ ವಾಸ: ಜುಮ್ಮಾ ಮಸೀದಿ ರೋಡ್ ಕಂಡ್ಲೂರು ಕುಂದಾಪುರ ತಾಲೂಕು ಹಾಲಿ ವಾಸ: ಐಶಾ ಮಸೀದಿ ಬಳಿ ಕೆಳಪೇಟೆ ಶಿರೂರು ಬೈಂದೂರು ತಾಲೂಕು ಎಂಬುವರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

0 ಕಾಮೆಂಟ್‌ಗಳು