ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಇವರಿ೦ದ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟೀಕಾ ಫೌ೦ಡೇಶನ್, ಬೆ೦ಗಳೂರು, ಮಾತೋಶ್ರೀ ಪದ್ಮಿನಿ ಎಜುಕೇಶನಲ್ ಸೊಸೈಟಿ, ಗೋವಾ, ಇವರ ಸಹಯೋಗದೊ೦ದಿಗೆ, ಗೋವಾ ಸನ್ಮಾನ್ಯ ಮುಖ್ಯಮ೦ತ್ರಿಗಳಾದ ಡಾ. ಪ್ರಮೋದ್ ಸಾವ೦ತ್ ಆವರ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ಉಚಿತ ಶಸ್ತçಚಿಕಿತ್ಸಾ ಶಿಬಿರವು ಗೋವಾ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಮತ್ತು ಕಾಲೇಜ್ ಆಫ್ ಫಿಸಿಯೋತೆರಪಿಯಲ್ಲಿ ನಡೆಯಿತು. ಮುಖ್ಯಮ೦ತ್ರಿ ಡಾ. ಪ್ರಮೋದ್ ಸಾವ೦ತ್ ಶಿಬಿರವನ್ನು ಉದ್ಘಾಟಿಸಿದರು. ಗೋವಾ ಆರೋಗ್ಯ ಸಚಿವ ಶ್ರೀ ವಿಶ್ವಜಿತ್ ರಾಣೆ, ಗೋವಾ ರಾಜ್ಯ ಆರೋಗ್ಯ ಸೇವಾ ನಿರ್ದೇಶನಾಲಯದ ಡಾ. ಮೀನಲ್ ಜೋಶಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ೨೫೫ ಮಂದಿಗೆ ತಪಾಸಣೆ ನಡೆಸಿ, ೨೬ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ಮತ್ತು ೧೦೫ ಜನರಿಗೆ ಉಚಿತ ಕನ್ನಡಕ ವಿತರಣೆಗೆ ಆಯ್ಕೆ ಮಾಡಲಾಯಿತು.

0 ಕಾಮೆಂಟ್‌ಗಳು