ಹಿರಿಯ ನಾಗರಿಕರಿಗೆ ಸೈಬರ್ ಅಪರಾಧ ಮತ್ತು ಮುಂಜಾಗ್ರತಾ ಕ್ರಮ: ಮಾಹಿತಿ ಕಾರ್ಯಕ್ರಮ

ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಆಶ್ರಯದಲ್ಲಿ ಇಂದು ಸಂಸ್ಥೆಯ ಕಚೇರಿಯಲ್ಲಿ ಸೈಬರ್ ಅಪರಾಧ ಮತ್ತು ಅವುಗಳ ಬಗ್ಗೆ ವಹಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ಒದಗಿಸುವ ಕಾರ್ಯಕ್ರಮ ಜರಗಿತು. ಉಡುಪಿ ಜಿಲ್ಲಾ C.E.N ಪೊಲೀಸ್ ಇನ್ಸ್‌ಪೆಕ್ಟರ್ ನೀಲೇಶ್ ರವರು ಇಂದು ಯಾವೆಲ್ಲ ರೀತಿಯ ಸೈಬರ್ ವಂಚನೆ ನಡೆಯುತ್ತಿದೆ ಅದರಲ್ಲೂ ಹೆಚ್ಚಾಗಿ ಹಿರಿಯ ನಾಗರಿಕರೇ ತೊಂದರೆಗೆ ಒಳಗಾಗಿದ್ದು ಯಾವೆಲ್ಲ ರೀತಿಯ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆ ವಿವರವಾದ ಮಾರ್ಗದರ್ಶನ ನೀಡಿದರು. ಸೈಬರ್ ಅಪರಾಧ ಠಾಣೆಯ ಪವನ್ ಕುಮಾರ್ ಹಾಗೂ ASI ಉಮೇಶ್ ರವರು ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ಮುರಳೀಧರ ರವರು ಪ್ರಾಸ್ತಾವಿಕ ಮಾತನಾಡಿದರು.ಗೌರವಾಧ್ಯಕ್ಷಸದಾನಂದ ಹೆಗ್ಡೆ, ಉಪಾಧ್ಯಕ್ಷ ಹರಿದಾಸ ನಾಯಕ್, ಕೋಶಾಧಿಕಾರಿ ಉಮೇಶ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ನಂದ ಕುಮಾರ್ ಸ್ವಾಗತಗೈದು ಜೊತೆ ಕಾರ್ಯದರ್ಶಿ ಜಯತಂತ್ರಿ ವಂದನಾರ್ಪಣೆಗೈದರು. ಕಾರ್ಯಕಾರಿಣಿಯ ಸದಸ್ಯ ಸದಾರಾಮ ಹೇರಳೆ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು