ಕೊಲ್ಲೂರಿನಿಂದ ಉಡುಪಿಗೆ ಆಗಮಿಸಿದ ಕೇರಳ ಹೈಕೋರ್ಟಿನ ನ್ಯಾಯಾಧೀಶರಾದ ಜಸ್ಟೀಸ್ ಈಶ್ವರನ್ ಅವರು ತಮ್ಮ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರನ್ನು ಶ್ರೀ ದೇವಸ್ಥಾನದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮೇನೇಜಿಂಗ್ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ.ಕೈಲಾಸನಾಥ ಶೆಣೈ, ಡಾ ವಿನಾಯಕ ಶೆಣೈ, ಪ್ರಭಾಕರ ಭಟ್, ಶ್ರೀ ಅಶೋಕ್ ಬಾಳಿಗ, ಶ್ರದ್ದಾಳು ಶ್ರೀ ಗುರುನಾಥ ರಾವ್, ಕೊಲ್ಕಾರ್ ಶ್ರೀನಿವಾಸ್ ಪ್ರಭು, ವ್ಯವಸ್ಥಾಪಕ ಶ್ರೀ ಸುರೇಶ್ ಭಟ್ ಮತ್ತಿತರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು