ಉಡುಪಿ ಸಂತೆಕಟ್ಟೆಯ ಗೋಪಾಲಕೃಷ್ಣ ಪ್ರಭು (೬೯) ಅವರು ಅಲ್ಪ ಕಾಲದ ಅಸೌಖ್ಯದಿಂದ (೦೩-೦೫-೨೦೨೬) ಮುಂಜಾನೆ ನಿಧನರಾದರು. ಹೋಟೆಲ್ ಉದ್ಯಮಿಯಾಗಿದ್ದ ಇವರು ದೀರ್ಘಕಾಲ ಮಣಿಪಾಲ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಪರಮ ಧಾರ್ಮಿಕರೂ, ಸೌಮ್ಯ ಸ್ವಭಾವದವರೂ, ಜನಾನುರಾಗಿದ್ದ ಇವರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಲಾಪ್ರೇಮಿಯಾಗಿದ್ದ ಇವರು ಯಕ್ಷಗಾನ ಕಲಾರಂಗ, ರಂಗಭೂಮಿ, ತುಳುಕೂಟದ ಆಜೀವ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

0 ಕಾಮೆಂಟ್‌ಗಳು