ಜೀವರಾಜ್ ಗೆಲುವು ಸಂವಿಧಾನ ಭದ್ಧ- ಸಂಸದ ಕೋಟ ಸ್ವಾಗತ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣ ಸಂವಿಧಾನ ಭದ್ದ ವಾಗಿದ್ದು ಕೊನೆಗೂ ಆ ಓ ಜೀವರಾಜ್ ಗೆ ನ್ಯಾಯಾಲಯದ ಮೂಲಕ ನ್ಯಾಯ ಸಿಕ್ಕಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಮತ ಎಣಿಕೆಯ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಅವರ ಕರ್ತವ್ಯ ಮಾಡಿದ್ದು ಒಟ್ಟಾರೆ ಕಾಂಗ್ರೆಸ್ ಆರೋಪಿಸುವಂತೆ ಯಾವುದೇ ಗೊಂದಲ ನಡೆದಿರುವುದು ಸಾಧ್ಯವಿಲ್ಲ. ನ್ಯಾಯಾಲಯ ಆಜ್ಞೆ ಪರಿಪಾಲಿಸುವುದು ಸ್ಪೀಕರ್ ರವರ ಕರ್ತವ್ಯವಾಗಿದ್ದು ಘನವೆತ್ತ ರಾಜ್ಯಪಾಲರ ಪ್ರವೇಶದ ನಂತರವಾದರೂ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಗೆಲುವು ಪಡೆದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆ ಪ್ರಮಾಣವಚನ ನೀಡಿದ್ದು ಸ್ವಾಗತಾರ್ಹ ಎಂದು ಕೋಟ ಹೇಳಿದ್ದಾರೆ. 

ಉಳಿದಿರುವ ಸಣ್ಣ ಅವಧಿಯಲ್ಲಿ ನೂತನ ಶಾಸಕ ಜೀವರಾಜ್ ತನ್ನ ಆಡಳಿತಾತ್ಮಕ ಅನುಭವದ ಮೂಲಕ ಅಭಿವೃದ್ಧಿ ಕೆಲಸ ಮಾಡಲೆಂದು ಕೋಟ ಶುಭ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು