ಮುಂಬೈನ ಕೇಬಲ್ ಕಾರ್ಪೋರೇಶನ್ ಆಫ್ ಇಂಡಿಯಾ ಕಂಪನಿಯ ಉದ್ಯೋಗಿಯಾಗಿದ್ದ ದಿವಂಗತ ರಮಾನಾಥ ಎಸ್. ಮಾಡ ಇವರ ಧರ್ಮಪತ್ನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ದಿವಂಗತ ಮುದ್ರಾಡಿ ಕೃಷ್ಣಯ್ಯ ಶೆಟ್ಟಿಯವರ ನಾಲ್ಕನೇ ಪುತ್ರಿ ಆತ್ರಾಡಿ ಬೀರ್ಬೆಟ್ಟು ಮನೆ ಶ್ರೀಮತಿ ಪೂರ್ಣಿಮಾ ಆರ್. ಮಾಡ ದಿನಾಂಕ: 01-05-2026ರಂದು ಮುಂಬೈಯ ಸ್ವಗೃಹದಲ್ಲಿ ನಿಧನಹೊಂದಿದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಮುಂಬೈಯಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಡುಗೈ ದಾನಿಯಾಗಿ ಅಪಾರ ಜನಮಣ್ಣನೆ ಗಳಿಸಿದ್ದರು. ಅವರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.

0 ಕಾಮೆಂಟ್‌ಗಳು