ಧರ್ಮಸ್ಥಳದಲ್ಲಿ 'ಕ್ಷಮತ್ವಂ 2026' ಅಂತರರಾಷ್ಟ್ರೀಯ ಸಮ್ಮೇಳನದ ಬ್ರೋಷರ್ ಬಿಡುಗಡೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಆಟೋಇಮ್ಯೂನ್ ಅಸ್ವಸ್ಥತೆಗಳಲ್ಲಿ ಟ್ರಾನ್ಸ್‌ಲೇಷನಲ್ ಆಯುರ್ವೇದದ ಕುರಿತಾದ 6ನೇ ಅಂತರರಾಷ್ಟ್ರೀಯ ಸಮ್ಮೇಳನ — ಕ್ಷಮತ್ವಂ 2026 ರ ಬ್ರೋಷರ್‌ ೨೭ ಏಪ್ರಿಲ್ ೨೦೨೬ ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಬಿಡುಗಡೆಯಾಯಿತು.

ಸಂಸ್ಥೆಯ ಪ್ರಾಚಾರ್ಯರಾದ ಡಾ. ಮಮತಾ ಕೆ.ವಿ., ಡಾ. ನಾಗರಾಜ್ ಎಸ್.,ಉಪಪ್ರಾಚಾರ್ಯರು (ಅಕಾಡಮಿಕ್) ಮತ್ತು ಕ್ಷಮತ್ವಂ 2026 ರ ಆಯೋಜನಾ ಕಾರ್ಯದರ್ಶಿಯಾದ ಡಾ. ಪ್ರಸನ್ನ ಮೊಗಸಾಲೆ ಅವರು ಧರ್ಮಸ್ಥಳಕ್ಕೆ ತೆರಳಿ ಗೌರವಾನ್ವಿತ ಧರ್ಮಾಧಿಕಾರಿಯವರನ್ನು ಭೇಟಿ ಮಾಡಿದರು. ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಆಶೀರ್ವಾದವನ್ನು ನೀಡಿ ಸಮ್ಮೇಳನದ ಬ್ರೋಷರ್ ಅನ್ನು ಬಿಡುಗಡೆ ಮಾಡಿ, ಸಮ್ಮೇಳನದ ಯಶಸ್ಸಿಗೆ ಹಾರೈಸಿದರು. 

ಕ್ಷಮತ್ವಂ 2026 ಸಮ್ಮೇಳನವು ೨೯ ಸೆಪ್ಟೆಂಬರ್ ರಿಂದ ೧ ಅಕ್ಟೋಬರ್ ೨೦೨೬ ರವರೆಗೆ ನಡೆಯಲಿದ್ದು, ದೇಶ-ವಿದೇಶಗಳ ಪ್ರಮುಖ ವೈದ್ಯರು, ಸಂಶೋಧಕರು ಮತ್ತು ಶಿಕ್ಷಣತಜ್ಞರನ್ನು ಒಂದೆಡೆ ಸೇರಿ ಆಯುರ್ವೇದದ ದೃಷ್ಟಿಕೋನದಿಂದ ಆಟೋಇಮ್ಯೂನ್ ಅಸ್ವಸ್ಥತೆಗಳ ಸಮಗ್ರ ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು