ಅಂಗಳ- 2026 ಸೃಜನ್ ಪೂಜಾರಿಗೆ ಸನ್ಮಾನ

ಎಸ್.ಎಸ್. ಎಲ್. ಸಿ .ಯಲ್ಲಿ ಅತ್ಯಧಿಕ ಅಂಕ ಪಡೆದು ಸಂಸ್ಥೆಗೆ ಪ್ರಥಮ ಬಂದಿರುವ ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿದ್ಯಾರ್ಥಿಗೆ ಅವರ ಮನೆಯ ಅಂಗಳದಲ್ಲಿಯೇ ಅವರ ಕುಟುಂಬಸ್ಥರು ನೆರೆಹೊರೆಯವರ ಸಮ್ಮುಖದಲ್ಲಿ ಸನ್ಮಾನಿಸುವುದು ಉತ್ತಮ ಚಿಂತನೆಯಾಗಿದೆ.

ಶಾಲೆ ಮತ್ತು ಸಮಾಜದ ಕೊಂಡಿಯಾಗಿ ವಿದ್ಯಾಭಾರತಿ ಕರ್ನಾಟಕ ಸಕ್ರಿಯವಾದ ಚಟುವಟಿಕೆಯನ್ನು ಮಾಡುತ್ತಿದೆ . ಎಂದು ಯು.ಎಸ್. ನಾಯಕ್ ಪ್ರೌಢ ಶಾಲೆ ಪಟ್ಲ ಮುಖ್ಯೋಪಾಧ್ಯಾಯರು ಶಾಂತಪ್ಪ ಮೂಲಂಗಿ ಅವರು ಹೇಳಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಅಂಗಳ- 2026 ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೃಜನ ಪೂಜಾರಿ ಅವರ ಕರಂಬಕ್ಕಾರು ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.

2025 - 26 ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸೃಜನ್ 625 ರಲ್ಲಿ 589 ಅಂಕ ಪಡೆದು ಸನ್ಮಾನ ಸ್ವೀಕರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಧಕನ ತಂದೆ ಸಂಜಯ್ ಪೂಜಾರಿ ತಾಯಿ ಶ್ರೀಮತಿ ಸುಜಾತ ಪೂಜಾರಿ ಉಪಸ್ಥಿತರಿದ್ದರು.

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು .ಕಾರ್ಯಕ್ರಮದಲ್ಲಿ ಸಂಸ್ಥೆಯ ಗಣಿತ ಶಿಕ್ಷಕ ಸ್ವದೇಶ್ ಶೆಟ್ಟಿ, ಚಿತ್ರಕಲಾ ಶಿಕ್ಷಕ ಸದಾನಂದ , ನೆರೆಹೊರೆಯವರು ಕುಟುಂಬಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು