ದಿನಾಂಕ 23-04-2026 ರಂದು ಮದ್ಯಾಹ್ನ 15.00 ಗಂಟೆಯಿಂದ ರಾತ್ರಿ 22.00 ಗಂಟೆ ಮದ್ಯಾವಧಿಯಲ್ಲಿ ಬೈಂದೂರು ಯಡ್ತರೆ ಗ್ರಾಮದ ಎಸ್. ಬಿ. ಐ. ಬ್ಯಾಂಕ್ ಹಿಂಭಾಗದಲ್ಲಿ ರಾಜಸ್ತಾನ್ ಮೂಲದ ರಾವಲ್ ಸಿಂಗ್ ಎಂಬವರು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗಿನ ಗೋಡ್ರೇಜ್ನಲ್ಲಿ ಇರಿಸಿದ್ದ 6 ಲಕ್ಷ ನಗದು ಹಣವನ್ನು ಕಳವು ಮಾಡಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 41/2026 ಕಲಂ 331 (3) 331 (4) 305 BNS ರಂತೆ ಪ್ರಕರಣವು ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತನಿರೀಕ್ಷಕರಾದ ಶಿವಕುಮಾರ್ ಬಿ. ರವರು ನಡೆಸುತ್ತಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಮಹೇಂದ್ರ ಸೈನ್ ಪ್ರಾಯ:23 ವರ್ಷ,ತಂದೆ: ನಕತ್ ರಾಮ್ ವಾಸ:ರಾಣಿ ಬಟಾನಿ ಮಂದಿರ ಸಮೀಪ ಸೇತ್ರಾವ್ ಅಂಚೆ ಸಿರಿಗ್ರಾತ್ ತಾಲೂಕು ಜೋದ್ಪುರ್ (ಪಡೋತಿ)ಜಿಲ್ಲೆ, ರಾಜಸ್ಥಾನ, ಹಾಲಿ ವಾಸ ಬೈಂದೂರು ಬಂಕೇಶ್ವರದ ಡಿಸ್ ಪ್ಲೈ ಬಟ್ಟೆ ಅಂಗಡಿಯ ಹಿಂದುಗಡೆ ಇರುವ ಸ್ಟೀಪನ್ ರವರ ಬಾಡಿಗೆ ಮನೆ ಈತನ ಪತ್ತೆಗಾಗಿ ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಸುನೀಲ್ ಕುಮಾರ್. ಬಿ.ವೈ ಮತ್ತು ನವೀನ ಬೋರಕರ, ಹಾಗೂ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಂತೋಷ ಕುಮಾರ ಯು, ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಹಾಗೂ ಬೈಂದೂರು ವೃತ್ತ ಕಛೇರಿ ಸಿಬ್ಬಂದಿಯವರಾದ ಶಿವಾನಂದ ಹುದ್ದಾರ ಅಶೋಕ ರಾಥೋಡ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಛೇರಿ ಸಿಡಿಆರ್ ವಿಭಾಗದ ದಿನೇಶ್ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ದಿನಾಂಕ 07.05.2026 ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ, ಆತನು ಕಳವು ಮಾಡಿರುವ ರೂ 6 ಲಕ್ಷ ನಗದನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ.

0 ಕಾಮೆಂಟ್‌ಗಳು