ಜಗತ್ತಿನಲ್ಲಿ ಕಲೆ ಇಲ್ಲದ ನೆಲೆಯಿಲ್ಲ ~ಡಾ ಭ್ರಾಮರಿ ಶಿವಪ್ರಕಾಶ್

"ಜಗತ್ತಿನಲ್ಲಿ ಕಲೆ ಇಲ್ಲದ ನೆಲೆ ಇಲ್ಲ. ವಿದ್ಯೆ,ರಂಜನೆ ಮತ್ತು ಸಮೃದ್ದಿ - ಇದು ಎಲ್ಲ ಕಲೆಗಳ ಮೂಲ ಉದ್ದೇಶ. ಸಂಗೀತ, ಸಾಹಿತ್ಯ, ನೃತ್ಯ, ನಾಟ್ಯ,ಚಿತ್ರ, ಶಿಲ್ಪ ಈ ಎಲ್ಲ ಲಲಿತ ಕಲೆಗಳ ನಡುವೆ ಇರುವ ಪರಸ್ಪರ ಅಂತರ್ ಸಂಬಂಧವನ್ನು ಅರಿಯಬೇಕು. ಭಾರತವು ಜಗತ್ತಿಗೆ ಕೊಟ್ಟ ದೊಡ್ದ ಕೊಡುಗೆ ಎಂದರೆ ನೃತ್ತ,ನೃತ್ಯ ಮತ್ತು ನಾಟ್ಯ.ಇದು ಅಖಂಡ ಜಗತ್ತಿನ ಎಲ್ಲ ಬಗೆಯ ನೃತ್ಯ ಪ್ರಕಾರಗಳಿಗೆ ಅನ್ವಯಿಸುತ್ತದೆ." ಎಂದು ಖ್ಯಾತ ನೃತ್ಯ ವಿದುಷಿ ಮತ್ತು ವಿಮರ್ಶಕಿ ಡಾ ಭ್ರಾಮರಿ ಶಿವಪ್ರಕಾಶ್ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ನುಡಿದರು‌. ಅವರು ಕಾಲೇಜಿನಲ್ಲಿ ಏರ್ಪಡಿಸಿದ್ದ ನೃತ್ಯ ರಸಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾವಿದ ಮತ್ತು ರಸಿಕರ ನಡುವೆ ಇರುವ ಕಂದರವನ್ನು ನಿವಾರಿಸುವಲ್ಲಿಈ ಬಗೆಯ ಕಲಾಶಿಕ್ಷಣ ಕಾರ್ಯಕ್ರಮಗಳು ಸಹಕಾರಿ ಎಂದರು. ವಿದ್ಯಾರ್ಥಿ ಶಿಕ್ಷಕಿ ನಮೃತಾ ಸ್ವಾಗತಿಸಿದರೆ ಅನುಷಾ ದೀಪಕ್ ಅಂಚನ್ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಪ್ರಸ್ತಾವನೆಯ ಮಾತುಗಳನ್ನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು