ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಕಳೆದ 12 ವರ್ಷಗಳಿಂದ ಮಾಡಿರುವ ಸಾಧನೆಗಳು, ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿ, ಸಮರ್ಥ ಮತ್ತು ಸಮೃದ್ಧ ಭಾರತದ ನಿರ್ಮಾಣಕ್ಕೆ ಮೋದಿ ಸರ್ಕಾರದ ಶ್ರಮದ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಖ್ಯಾತ ಲೇಖಕಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಾಧವಿ ಭಂಡಾರಿ ಅವರಿಗೆ ನೀಡಿ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದೆ.
ಬಹಳ ಪ್ರೀತಿಯಿಂದ ನನ್ನ ಮತ್ತು ಬಿಜೆಪಿ ಕಾರ್ಯಕರ್ತರನ್ನು ಬರಮಾಡಿಕೊಂಡ ಮಾಧವಿ ಭಂಡಾರಿ ಮತ್ತು ಶ್ರೀಧರ ಭಂಡಾರಿ ದಂಪತಿಗಳಿಗೆ ಅಭಿನಂದನೆಗಳು..
ನನ್ನೊಂದಿಗೆ ಬಿ.ಜೆ.ಪಿ ನಗರ ಮಂಡಲ ಅಧ್ಯಕ್ಷ ದಿನೇಶ್ ಅಮೀನ್, ಪಾರ್ಟಿ ಮುಖಂಡರಾದ ಶ್ರೀ ಸುರೇಶ್ ನಾಯಕ್, ವಾರ್ಡ್ ಅಧ್ಯಕ್ಷರಾದ ನಿತಿನ್ ಪೈ, ಸತೀಶ್ ಪೂಜಾರಿ, ಹರೀಶ್ ಮತ್ತು ಮೈಕಲ್ ಡಿಸೋಜ ಇದ್ದರು.

0 ಕಾಮೆಂಟ್‌ಗಳು