ಕುಂದಾಪುರ : ಕಳ್ಳರ ಬಂಧನ!

ದಿನಾಂಕ: 23.05.2026 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿರುವ ನಿರಂಜನ್‌ ಭಟ್‌ ಎಂಬವರ ವಾಸದ ಮನೆಯಲ್ಲಿ ಬೆಳಿಗ್ಗೆ 11:47 ಗಂಟೆಯಿಂದ ರಾತ್ರಿ 09:10 ಗಂಟೆಯ ನಡುವೆ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ನೀಡಿದ ದೂರಿನ ಅನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 27/2026 U/s. 331(3), 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

 ಈ ಪ್ರಕರಣದ ತನಿಖೆಯನ್ನು H.D ಕುಲಕರ್ಣಿ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ, ಹಾಗೂ ಸಂತೋಷ ಎ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ ರವರ ನೇತೃತ್ವದಲ್ಲಿ ನಿರಂಜನ್‌ ಗೌಡ, ಪೊಲೀಸ್ ಉಪ ನಿರೀಕ್ಷಕರು (ಕಾ.ಸು), ಚಂದ್ರಕಲಾ ಮ ಪತ್ತಾರ ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ರಾಜು ಬಿ. ಮೌನೇಶ್, ಶ್ರೀಧರ್‌ ಪಾಟೀಲ್‌, ಕಿರಣ ಬಿ ಪಾಟೀಲ್‌, ಶಂಕರನಾರಾಯಣ ಪೊಲೀಸ್‌ ಠಾಣಾ ಸಿಬ್ಬಂದಿಯವರಾದ ಜಯರಾಮ, ಅಮಾಸೆಬೈಲು ಪೊಲೀಸ್‌ ಠಾಣಾ ಸಿಬ್ಬಂದಿಯವರಾದ ಸುಧಾಕರ, ಚಂದ್ರ ಹಾಗೂ ಕುಂದಾಪುರ ಪೊಲೀಸ್‌ ಠಾಣಾ ಸಿಬ್ಬಂದಿಯವರಾದ ಸಂತೋಷ, ಪ್ರಿನ್ಸ್, ಕೊಲ್ಲೂರು ಪೊಲೀಸ್ ಠಾಣೆಯ ನಾಗೇಂದ್ರ, ಬೈಂದೂರು ಪೊಲೀಸ್ ಠಾಣೆಯ ಚಿದಾನಂದ, ಮಾಳಪ್ಪರವರ ತಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಲ್ಲಿ ದಿನಾಂಕ:03.06.2026 ರಂದು 2ನೇ ಆರೋಪಿ ವಿಜಯ ಶೆಟ್ಟಿ(32), ತಂದೆ; ಭಾಸ್ಕರ್ ಶೆಟ್ಟಿ, ವಾಸ; ತಂತ್ರಾಡಿ ಬಾಯರಬೆಟ್ಟು, ಕಾಡೂರು ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಆಪಾದಿತನಿಂದ ಕಳವಾದ ಸ್ವತ್ತುಗಳಲ್ಲಿ ಸುಮಾರು 9 ಲಕ್ಷ ಮೌಲ್ಯದ 66.22 ಗ್ರಾಂ ಚಿನ್ನ & 175.4 ಗ್ರಾಂ ಬೆಳ್ಳಿಯನ್ನು ಹಾಗೂ 3ನೇ ಆರೋಪಿ ಅರ್ಜುನ ಪೂಜಾರಿ(29), ತಂದೆ: ಶಿವಾಜಿ ವಾಸ: ಮನೆ ನಂಬ್ರ 4-100/3, ಇಂದಾರು, 5 ಸೆಂಟ್ಸ್‌, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಕಳವಾದ ಸ್ವತ್ತುಗಳಲ್ಲಿ ಸುಮಾರು 2 ಲಕ್ಷ ಮೌಲ್ಯದ 18.200 ಗ್ರಾಂ ಚಿನ್ನವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಪ್ರಕರಣದ 1ನೇ ಆಪಾದಿತ ಮೊಹಮ್ಮದ್‌ ಅಶ್ರಫ್‌ ಎಂಬಾತನು ತಲೆ ಮರೆಸಿಕೊಂಡಿದ್ದು ಆತನನ್ನು ದಸ್ತಗಿರಿ ಮಾಡಲು ಬಾಕಿ ಇರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು