ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ), ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 5.07.2026 ನೇ ಭಾನುವಾರ ಬೆಳಿಗ್ಗೆ 9:00ಗಂಟೆಗೆ ಆದರ್ಶ ಆಸ್ಪತ್ರೆ,ಉಡುಪಿ ಜಿಲ್ಲೆ ವೈದ್ಯರ ದಿನಾಚರಣೆ, ವೈದ್ಯರಿಗೆ ಸನ್ಮಾನ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ
ಈ ಸಮಾರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಸೇವೆಯನ್ನು ನೀಡಿದ ವೈದ್ಯರುಗಳಾದ ಡಾ.ಮೋಹನ್ ದಾಸ್ ಶೆಟ್ಟಿ ,ಮೂಳೆ ಮತ್ತು ಕೀಲು ರೋಗ ತಜ್ಞರು ಆದರ್ಶ ಆಸ್ಪತ್ರೆ ಉಡುಪಿ, ಡಾ ರಿಜ್ವಾನ್ ಅಹಮದ್, ಮೂಳೆ ಮತ್ತು ಕೀಲು ರೋಗ ತಜ್ಞರು,ಸಿಟಿ ನರ್ಸಿಂಗ್ ಹೋಂ ಕಾರ್ಕಳ, ಡಾ. ಆಶಿಕ್ ಕುಮಾರ್ ಹೆಗ್ಡೆ ವೈದ್ಯಕೀಯ ತಜ್ಞರು ಸೇಂಟ್ ಇಗ್ನೇಶಿಯಸ್ ಆಸ್ಪತ್ರೆ ಹೊನ್ನಾವರ,ಡಾ . ಸವಿತಾ ಕುಂದರ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ಜೆ, ಡಾ. ಗಿರೀಶ್ ಗೌಡ ವೈದ್ಯಾಧಿಕಾರಿಗಳು ಪ್ರಾಥಮಿಕ ಅರೋಗ್ಯ ಕೇಂದ್ರ,ಬಜಗೋಳಿ ಇವರಿಗೆ ಸನ್ಮಾನಿಸಲಾಗುವುದು. ಈ ಸಮಾರಂಭದಲ್ಲಿ ಮಾಜಿ ಸಚಿವರು ಮತ್ತು ಸಂಸದರಾದ ಶ್ರೀ ಕೆ ಜಯಪ್ರಕಾಶ್ ಹೆಗ್ಡೆ,ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿ ರಾಮ್ ಶಂಕರ್ ಐಪಿಎಸ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀ ಬಸವರಾಜ ಹುಬ್ಬಳಿ,ಉಡುಪಿ ಜಿಲ್ಲಾ ಸರ್ಜನ್ ಡಾ ಅಶೋಕ್ ಎಚ್ ಭಾಗವಹಿಸಲಿರುವರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದ ಸಂಪೂರ್ಣ ಪರೀಕ್ಷೆ (CBC), ರಕ್ತದ ಸಕ್ಕರೆ ಪರೀಕ್ಷೆ (RBS), ಕೊಲೆಸ್ಟ್ರಾಲ್ ಪರೀಕ್ಷೆ, ಇಸಿಜಿ (ECG) ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ಅಗತ್ಯವಿರುವವರಿಗೆ ಹೃದಯ ತಜ್ಞರ ಸಲಹೆ, ಇಕೋ (ECHO) ಹಾಗೂ ಟ್ರೆಡ್‌ಮಿಲ್ ಟೆಸ್ಟ್ (TMT) ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

0 ಕಾಮೆಂಟ್‌ಗಳು