BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

ಬನ್ನಂಜೆಯ ಆವೈಜ್ಞಾನಿಕ ಡಿವೈಡರ್ ಕೂಡಲೇ ಮುಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ

ಬನ್ನಂಜೆಯ ಆವೈಜ್ಞಾನಿಕ ಡಿವೈಡರ್ ಕೂಡಲೇ ಮುಚ್ಚಿಸುವ ಬಗ್ಗೆ ನಮ್ಮ ಕರ್ನಾಟಕ ಸೇನೆ, ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ ಜಿಲ್ಲಾಧಿಕಾರಿಗೆ ಶ್ರೀಮತಿ ಸ್ವರೂಪ ಟಿ.ಕೆ ಯವರಿಗೆ ಮನವಿ ನೀಡಲಾಯಿತು. 

ದಿನಾಂಕ -16/07/2026 ರಂದು ಗುರುವಾರ ಉಡುಪಿ ಜಿಲ್ಲೆಯಿಂದ ಕರಾವಳಿ-ಮಲ್ಪೆ-ಬನ್ನಂಜೆ ಗ್ರಾಮದ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆಯ ಎದುರು ಪಟ್ಟಭದ್ರಾ ಹಿತಾಸಕ್ತಿಗಳು ಘನ ಹಾಗೂ ಲಘು ವಾಹನಗಳು ಯಾವುದೇ ರೀತಿಯ ನಿಲ್ದಾಣವಿಲ್ಲದೆ, ರಸ್ತೆ ಬದಿಯ ಜಯಲಕ್ಷ್ಮೀ ಸಿಲ್ಕ್ ಸೀರೆಯ ಮಳಿಗೆಯ ಎದುರು ಹಾಗೂ ಇದರ ಬಳಿಯ ಪೆಟ್ರೋಲ್ ಪಂಪ್‌ನಿಂದ ಕರಾವಳಿ ಬೈಪಾಸ್‌ವರೆಗೆ ವಾಹನ ತಿರುಗಿಸಲು ಹಾಗೂ ವಾಹನ ತಂಗುದಾರರನ್ನು ಜರೂರಾಗಿ ನಿಯಂತ್ರಿಸಿ. ನಿತ್ಯ ಪ್ರಯಾಣಿಕರಾದ ಸಾರ್ವಜನಿಕರಿಗೆ ಸುಗಮ ರೀತಿಯ ರಸ್ತೆ ಸಂಚಾರಕ್ಕೆ ಅನುವು ಮಾಡುವಂತೆ ತಮ್ಮ ಘನ ಸನ್ನಿಧಾನದಲ್ಲಿ ವಿನಮ್ರ ಪ್ರಾರ್ಥನೆ.


ಗೌರವಾನ್ವಿತ ಮಹೋದಯರೇ,

ಜಿಲ್ಲಾ ಕರಾವಳಿಗರಾದ ನಾವುಗಳು, ಉಡುಪಿ ಜಿಲ್ಲೆಯ ಸಿಟಿ ಹಾಗೂ ಸರ್ವೀಸ್ ಬಸ್ಸು ತಂಗುದಾಣ ಇಲ್ಲಿಂದ ಕರಾವಳಿ ಬೈಪಾಸ್ ರಸ್ತೆಗೆ ತಲುಪುವರೇ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಖ್ಯ ಪ್ರವೇಶದ್ವಾರದ ಎದುರಿನ ರಸ್ತೆಯನ್ನು ನಾವುಗಳು ಈಗಾಗಲೇ ಅವಲಂಬಿಸಿರುತ್ತೇವೆ.

ಸದ್ರಿ ಮೂರು ಹೊತ್ತು ದುಡಿದರೆ ಒಷ್ಟೊತ್ತು ಕೂಳುಣ್ಣುವ ಬಡ ವಾಹನ ಚಾಲಕರಾದ ನಾವುಗಳು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದ ಎದುರಿನ ರಸ್ತೆಯ ಮೂಲಕ ಹಾದು ಹೋಗುವಾಗ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆ ಹಾಗೂ ಪೆಟ್ರೋಲ್ ಬಂಕ್ ಸಮೀಪದಲ್ಲಿ ಸ್ಥಳೀಯ ಅರಕ್ಷಕರು ಈಗಾಗಲೇ ಡಿವೈಡರ್ ಹಾಕಿದ್ದು, ಆದರೆ ಇಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ಆರಕ್ಷಕ ಠಾಣಾ ಇಲಾಖೆಯ ಪೇದೆಯಾಗಲೀ ಸ್ಥಳೀಯ ಅರಕ್ಷಕ ಪೇದೆಗಳು ಯಾರೂ ಇರುವುದಿಲ್ಲ. ಇದಲ್ಲದೇ ಈ ರಸ್ತೆಯ ಮಧ್ಯೆಯಿರುವ ಮಧ್ಯೆ ಪಥ ರೇಖೆಯನ್ನು ಸ್ಥಳೀಐ ಸಂಬಂಧಿತ ಇಲಾಖಾ ನೌಕರರುಗಳು ತುಂಡರಿಸಿದ್ದರಿಂದಾಗಿ ಇದೇ ರಸ್ತೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವು ಘನ ಹಾಗೂ ಲಘು ವಾಹನ, ದ್ವಿಚಕ್ರ ತ್ರಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಯಾರದೇ ಅಂಜಿಕೆಯಿಲ್ಲದೆ, ಅಡ್ಡದಿಡ್ಡಿಯಾಗಿ ಯಾರೂ ಕೇಳುವವರಿಲ್ಲದೆ ತಿರುಗಿಸುವುದು. ಹಾಗೂ ಇದೇ ಸ್ಥಳದಲ್ಲಿ ಹಲವಾರು ಬಾರಿ ರಸ್ತೆ ಅಪಘಾತಗಳು ನಡೆದು ಪ್ರಾಣಕ್ಕೆ ಕುಂದುಂಟಾದರೂ ಇದನ್ನು ಲೆಕ್ಕಿಸದೆ ಈ ಬಗ್ಗೆ ಇನ್ನೂ ಜಾಗೃತವಾಗದ ಸ್ಥಳೀಯ ಜಿಲ್ಲಾಡಳಿತ ಮತ್ತು ಸ್ಥಳೀಯ ಅರಕ್ಷಕ ವೃಂದದವರು ಇನ್ನಾದರೂ ಈ ರಸ್ತೆಯಲ್ಲಿ ಸಂಚರಿಸುವ ದಿನನಿತ್ಯ ವಾಹನ ಸವಾರರಿಗೆ ಯಾವುದೇ ತೆರನಾಗಿ ರಸ್ತೆ ತಡೆಯಾಗದಂತೆ, ಜಯಲಕ್ಷ್ಮೀ ಸಿಲ್ಕ್ ಸೀರೆಯ ಮಳಿಗೆಯ ಎದುರು ಯಾವುದೇ ಘನ ಹಾಗೂ ಲಘು ವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸದಂತೆ ಸಂಬಂಧಿಸಿದ ಜಿಲ್ಲಾಡಳಿತದಿಂದ ಖಡಕ್ಕಾದ ಎಚ್ಚರಿಕೆ ನೀಡುವುದು ಹಾಗೂ ರಸ್ತೆಯ ನಡು ಪಥದ ಮಧ್ಯ ರೇಖೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ದಿನಂಪ್ರತಿ ರಸ್ತೆ ಸಂಚಾರ ನಡೆಸುವ ನಾಗರೀಕರ ಪ್ರಾಣವನ್ನುಳಿಸುವಲ್ಲಿ ಗೌರವಾನ್ವಿತರುಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ.

ಸದ್ರಿ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆಯ ಮುಂಭಾಗದಲ್ಲಿ ಹಾಗೂ ಉಡುಪಿ ನಗರ ವ್ಯಾಪ್ತಿಯ ಉಡುಪಿ ನಗರದೊಳಗಿನ ಎಲ್ಲಾ ರಸ್ತೆಗಳಲ್ಲಿ ಯಾವುದೇ ತೆರನಾದ ಘನ ಹಾಗೂ ಲಘು ಮತ್ತು ದ್ವಿಚಕ್ರ ವಾಹನವನ್ನು ರಸ್ತೆ ಮಧ್ಯದಲ್ಲಿಯೇ ಬೇಕಾಬಿಟ್ಟಿಯಾಗಿ ನಿಲ್ಲಿಸಿ. ಇನ್ನೆಲಿಗೊ ತೆರಳುವುದು ಹಾಗೂ ಈ ಮೂಲಕ ನಮ್ಮ ದಿನನಿತ್ಯ ಪ್ರಯಾಣಿಕರಿಗೆ ಸುಗಮ ರಸ್ತೆ ಸಂಚಾರಕ್ಕೆ ತೀರಾ ಅಡ್ಡಿಯಾಗಿರುತ್ತದೆ. ಗೌರವಾನ್ವಿತರಾದ ತಾವುಗಳು ಉಡುಪಿ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಉಡುಪಿ ನಗರದೊಳಗಿನ ರಸ್ತೆಗಳಲ್ಲಿ ಯಾವುದೇ ತೆರನಾದ ಘನ ಹಾಗೂ ಲಘು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ, ರಸ್ತೆಯ ಉಭಯ ಪಾರ್ಶ್ವಗಳಲ್ಲಿ ರಸ್ತೆ ಸೌಂದರ್ಯವನ್ನು ದೃತಿಗೆಡಿಸುವುದು ಹಾಗೂ ಈ ರೀತಿ ರಸ್ತೆ ಮಧ್ಯದಲ್ಲಿ ಯಾವುದೇ ವಾಹನವನ್ನು ನಿಲ್ಲುವರೇ ಅವಕಾಶ ಕಲ್ಪಿಸಬಾರದು.ಸದ್ರಿ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆಯ ಎದುರಿನ ರಸ್ತೆಯ ಮಧ್ಯ ಪಥವನ್ನು ಛೇದಿಸಿದ್ದು, ಇದನ್ನು ಜರೂರಾಗಿ ಸಂಪೂರ್ಣವಾಗಿ ಬಂದ್ ಮಾಡಿ ದಿನಂಪ್ರತಿ ರಸ್ತೆ ಸಂಚಾರ ನಡೆಸುವ ನಿತ್ಯ ವಾಹನ ಸವಾರರಿಗೆ ಸುಗಮ ರಸ್ತೆ ಸಂಚಾರ ನಡೆಸುವರೇ ಅವಕಾಶವನ್ನು ಕಲ್ಪಿಸಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ.

ಸದ್ರಿ ಈ ಮೇಲಿನ ನಮ್ಮ ಬೇಡಿಕೆಯನ್ನು ಗೌರವಾನ್ವಿತ ಮಹೋದಯರಾದ ತಾವುಗಳು ಮತ್ತು ತಮ್ಮ ಕೈಕೆಳಗಿನ ಸಂಬಂಧಿಸಿದ ಗಣ್ಯರುಗಳು ಈಡೇರಿಸದೇ ಇದ್ದಲ್ಲಿ ಮುಂದಕ್ಕೆ ನಮ್ಮ ಜಿಲ್ಲೆಯ ಹಾಗೂ ಉಭಯ ಜಿಲ್ಲೆಯ ನಮ್ಮ ಕರ್ನಾಟಕ ಸೇನೆಯಿಂದ ತೀವ್ರ ತೆರನಾದ ಹೋರಾಟವನ್ನು ಪ್ರಶಸ್ತಿ ಸ್ಥಳ ಗುರುತಿಸಿ ಭವಿತವ್ಯದಲ್ಲಿ ನಾವುಗಳು ನಡೆಸುವರೇ ಈಗಾಗಲೇ ತೀರ್ಮಾನಿಸಿರುತ್ತೇವೆ. ಈ ಮೂಲಕ ನಮ್ಮ ಹೋರಾಟವು ಕಾರ್ಯಗತವಾಗುವುದರೊಳಗೆ ತಮ್ಮ ಕರ ಚಮತ್ಕಾರದ ಮೂಲಕ ಸಂಬಂಧಿಸಿದ ಸಿಬ್ಬಂದಿಗಳನ್ನು ಜಾಗೃತಗೊಳಿಸಿ. ನಮ್ಮ ಬೇಡಿಕೆಗಳನ್ನು ಜರೂರಾಗಿ ಈಡೇರಿಸಿ ಕಾರ್ಯೋನ್ಮುಖರಾಗಿ ಸ್ವಚ್ಛ ಸುಂದರ ಉಡುಪಿ ಜಿಲ್ಲೆಯನ್ನಾಗಿ ಪರಿವರ್ತಿಸುವಲ್ಲಿ ನಿದ್ರಾಂಗನೆಯ ಮಡಿಲಲ್ಲಿ ಪವಡಿಸಿರುವ ಎಲ್ಲಾ ಇಲಾಖಾ ನೌಕರರನ್ನು ಈ ಮೂಲಕ ಜಾಗೃತಿಗೊಳಿಸಿ. ಸದ್ರಿ ಈ ವಿಚಾರಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಇದರೊಂದಿಗೆ ಲಗ್ತಿಸಿ. ನಮ್ಮೆಲ್ಲಾ ಬೇಡಿಕೆಗಳನ್ನು ಕ್ಷಿಪ್ರ ಕ್ಷಿಪ್ರವಾಗಿ ಈಡೇರಿಸಲೇಬೇಕೆಂದು ಶ್ರೀಮತಿ ಸ್ವರೂಪ ಟಿ ಕೆ ಮಾನ್ಯ ದಂಡಾಧಿಕಾರಿ ಯವರಿಗೆ ಉಡುಪಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಹಾಗೂ ಸರ್ವ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷರು ಆನಂದ್ ಶೆಟ್ಟಿ. ಜಿಲ್ಲಾ ಮಹಿಳಾಧ್ಯಕ್ಷರು ಅನಿತಾ ಬಿವಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಗೀತಾ ಬಾಲಕೃಷ್ಣ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್. ಜಿಲ್ಲಾ ಸಲೆಗಾರರು ತೇಜಸ್ ರಾವ್. ಜಿಲ್ಲಾ ಕಾರ್ಮಿಕ ಅಧ್ಯಕ್ಷರು ಸಿದ್ದಣ್ಣ ಪೂಜಾರಿ. ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷರು ಮೊಹಮ್ಮದ್ ಜಾಫರ್. ಜಿಲ್ಲಾ ಕೋಶಾಧಿಕಾರಿ ವಿಶ್ವನಾಥ್. ಜಿಲ್ಲಾ ಜಾಲತಾಣ ಸಂಚಾಲಕರು ಪ್ರದೀಪ್. ಜಿಲ್ಲಾ ಸಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಆಚಾರ್ಯ. ಆಟೋ ತಾಲೂಕ್ ಅಧ್ಯಕ್ಷರಾದ ಸತೀಶ್. ಆಟೋ ತಾಲೂಕು ಉಪಾಧ್ಯಕ್ಷರಾದ ಶ್ರೀಧರ್. ಜಿಲ್ಲಾ ಸದಸ್ಯರು ಸುಬ್ರಹ್ಮಣ್ಯ. ಮೊದಲ ದೇವರು ಉಪಸತ್ತಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!