ಮುಕುಂದ ಕೃಪಾ ಶಾಲೆಯಲ್ಲಿ 'ವನಮಹೋತ್ಸವ' ಆಚರಣೆ

"ನಮ್ಮ ಮನೆ, ನಮ್ಮ ಮರ" ತಂಡದ ಶ್ರೀ ರವಿರಾಜ್, ಶ್ರೀ ಗುರುರಾಜ ಸನಿಲ್ ಹಾಗೂ ಅವಿನಾಶ್ ಕಾಮತ್ ಒಂದುಗೂಡಿ ಮುಕುಂದ ಕೃಪಾ ಶಾಲೆಯಲ್ಲಿ ವನಮಹೋತ್ಸವ ಆಚರಿಸಿದರು. ಶಾಲಾ ಮುಖ್ಯ ಅಧ್ಯಾಪಿಕೆ ಶ್ರೀಮತಿ ವಿನುತಾ ಎಸ್ ನಾಯಕ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಕಲ್ಪನಾ ಕಾರ್ಯಕ್ರಮ ನಿರ್ವಹಿಸಿದರು. ತಂಡದ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಮಕ್ಕಳ ಜೊತೆಗೂಡಿ ಹಣ್ಣಿನ ಸಸಿಗಳನ್ನು ನೆಟ್ಟರು, ಮುಂದಿನ ದಿನಗಳಲ್ಲಿ ಸಿಹಿ ಭರಿತ ಹಣ್ಣುಗಳು ಬೆಳೆದು, ಅವುಗಳನ್ನು ಸವಿದು ಮಕ್ಕಳ ಬಾಳು ಸಿಹಿಯಾಗಲಿ ಎಂದು ಹರಸಿದರು. ಪ್ರತಿಯೊಂದು ಮಕ್ಕಳು ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಪ್ರಕೃತಿ ಸಂರಕ್ಷಣೆ ಮಾಡಬೇಕೆಂದು ಕಿವಿ ಮಾತನ್ನು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು