ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ಇನ್ನಂಜೆ : ಯಕ್ಷಶಿಕ್ಷಣ ತರಗತಿ ಉದ್ಘಾಟನೆ

ಎಸ್.ವಿ.ಎಚ್.ಕನ್ನಡ ಮಾಧ್ಯಮ ಪ್ರೌಢಶಾಲೆ ಇನ್ನಂಜೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇವರ ಸಹಯೋಗದಲ್ಲಿ ೨೦೨೬-೨೭ ನೇ ಶೈಕ್ಷಣಿಕ ವರ್ಷದ ಯಕ್ಷಶಿಕ್ಷಣ ತರಗತಿಯ ಉದ್ಘಾಟನೆಯನ್ನು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾದಾಕೃಷ್ಣ ಎಸ್ ಐತಾಳ್ ದೀಪ ಬೆಳಗಿಸಿ ಉದ್ಘಾಟಿಸಿ ಕರಾವಳಿಯ ಈ ಕಲೆಯನ್ನು ಉಳಿಸಿ ಬೆಳಸಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ ವಿ.ಜಿ.ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಅಭಿನಯ ನಾಟ್ಯ ಜ್ಞಾನವನ್ನು ನೀಡುವ ಈ ಕಲೆಯಿಂದ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀ ನಾರಾಯಣ ಎಂ. ಹೆಗಡೆಯವರು ಯಕ್ಷಗಾನದ ಮಹತ್ವ, ಯಕ್ಷಶಿಕ್ಷಣ ಯಕ್ಷಗಾನ ಕಲಾರಂಗ ನಡೆಸುವ ಸಮಾಜಮುಖಿ ಸೇವೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ವೇದಿಕೆಯಲ್ಲಿ ರಂಗ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ಯಕ್ಷಗಾನ ಗುರುಗಳಾದ ಶಾಂತರಾಮ ಆಚಾರ್ಯ, ಕಾಲೇಜಿನ ಪ್ರಾಚಾರ್ಯರಾದ ರಾಜೇಂದ್ರ ಪ್ರಭು, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸುಷ್ಮಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ನಟರಾಜ ಉಪಾದ್ಯ ಸ್ವಾಗತಿಸಿದರು. ಶಶಿಕಲಾ ಧನ್ಯವಾದ ತಿಳಿಸಿದರು. ಅನಿತ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು