ಯುವಕ ಮಂಡಲ (ರಿ.) ಸಾಣೂರು ಆಶ್ರಯದಲ್ಲಿ ಗೃಹ ಜ್ಯೋತಿ ಮರು ಪರಿಶೀಲನೆ ಅರ್ಜಿ ಭರ್ತಿ ಮಾಡುವ ಕಾರ್ಯಕ್ರಮ

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ಆಶ್ರಯದಲ್ಲಿ ಗೃಹ ಜ್ಯೋತಿ ಮರು ಪರಿಶೀಲನೆ ಅರ್ಜಿಯನ್ನು ಭರ್ತಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಸಾಣೂರಿನ ಸುಮಾರು 73 ಮಂದಿಗೆ ಅರ್ಜಿ ಭರ್ತಿ ಮಾಡಿಕೊಡಲಾಯಿತು. 

ಪವರ್ ಮ್ಯಾನ್ ಗಳಾದ ದಸ್ತಗಿರಿ ಮತ್ತು ವಿಜಯ್ ಅವರೊಂದಿಗೆ ಮಂಡಲದ ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಅರ್ಜಿ ಭರ್ತಿ ಮಾಡಲು ಸಹಕರಿಸಿದರು. 

ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಕಾರ್ಯದರ್ಶಿ ರಾಜೇಶ್ ಪೂಜಾರಿ ಮಾಜಿ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು