"ತಮಗಿಂತ ದಶಕಗಳಷ್ಟು ಮುಂದಿರುವ ಜನಾಂಗವನ್ನು ಎದುರಿಸುವ ಸವಾಲು ಇಂದಿನ ಶಿಕ್ಷಕರ ಮುಂಧನಲಕ್ಷ್ಮ್ಸು, ಸಾರ್ಥಕತೆ,ಸಾಮರ್ಥ್ಯ ಯಾವುದೂ ಸುಲಭದಲ್ಲಿ ಒಲಿದು ಬರುವುದಿಲ್ಲ. ಅದಕ್ಕಾಗಿ ನಾವು ಅವಿರತವಾಗಿ ಶ್ರಮಪಡಬೇಕು. ಶಿಕ್ಷಕರು ತಮಗೆ ಎದುರಾದ ಸವಾಲುಗಳನ್ನು ಅರ್ಥಪೂರ್ಣವಾಗಿ ಅನುಸಂಧಾನ ಮಾಡಲು ಟ್ರಿಮ್, ಟ್ಯೂನ್ ಮತ್ತು ಟೈಲರ್ ಎಂಬ ತತ್ತ್ವವನ್ನು ಅಳವಡಿಸಿಕೊಳ್ಳಬೇಕು" ಎಂದು ಪೆರಂಪಳ್ಳಿಯ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಶ್ರೀ ಮತಿ ನೇತ್ರಾ.ಎಚ್ ಅವರು ನುಡಿದರು. ಅವರು ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪೂರ್ವವಿದ್ಯಾರ್ಥಿಗಳೂ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಶಿಕ್ಷಕರೂ ಆಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀ ಸೂರ್ಯನಾರಾಯಣ ಭಟ್,ಸೈಪಂಗಲ್ಲು ಅವರನ್ನು ಅಭಿನಂದಿಸಲಾಯಿತು.ಶ್ರೀ ಭಟ್ ತಮ್ಮ ಮಾತಿನಲ್ಲಿ ಕೃತಕಬುಧ್ಧಿಶಕ್ತಿ ನಮಗೆ ಬೇಕಾದ ಸಕಲ ಮಾಹಿತಿಯನ್ನೂ ಕ್ಷಣಾರ್ಧದಲ್ಲಿ ನೀಡಬಹುದು. ಅದರೆ ಅದಕ್ಕೆ ಹೃದಯವಿಲ್ಲ,ಮನಸ್ಸಿಲ್ಲ. ಶಿಕ್ಷಕರಾಗಿ ನೀವು ಕೃತಕ ಬುದ್ಧಿಶಕ್ತಿ ಬಳಸಿ.ಆದರೆ ಹೃದಯದಿಂದ ಪಾಠಮಾಡಿ. ಮನಸ್ಸುಳ್ಳ ಅಧ್ಯಾಪಕರು ನೀವಾಗಿ ಎಂದರು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ವಾರ್ಷಿಕ ವರದಿ ಮಂಡಿಸಿದರು.ಶ್ರೀ ಮತಿ ಮಮತಾ ಸಾಮಂತ್,ಶ್ರೀ ಮತಿ ಸೀತಮ್ಮ ಮತ್ತು ಶ್ರೀ ಮತಿ ಅಮೃತಾ ಆರ್.ಕೆ ಬಹುಮಾನ ವಿಜೇತರ ಯಾದಿಯನ್ನು ಓದಿ ಹೇಳಿದರು. ಕಾಲೇಜಿನ ಹಂತದಲ್ಲಿ ಗರಿಷ್ಟ ಅಂಕ ಗಳಿಸಿದ ಶ್ರೀ ಮತಿ ದೀಪಿಕಾ ಭಟ್ ತಮ್ಮ ಅಧ್ಯಯನ ವಿಧಾನವನ್ನು ನಿರೂಪಿಸಿದರು.ಪ್ರಥಮ ಬಿ.ಎಡ್ ಹಂತದಲ್ಲಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಚೈತ್ರಾ ಎಂ.ಸ್ವಸ್ತಿವಚನಕ್ಕೆ ಸ್ಪಂದಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಶಿಕ್ಷಕರು ಭಾವಗಾನ- ವೃಂದಗಾನ ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀ ಮತಿ ಪ್ರೀತಿ ಎಸ್ ರಾವ್ ಸ್ವಾಗತ ಕೋರಿದರೆ ಶ್ರೀ ಮತಿ ಧನಲಕ್ಷ್ಮೀ ವಂದನಾರ್ಪಣೆಗೈದರು.ಶ್ರೀ ಮತಿ ಕಲ್ಪನಾ ಶಯನ ಅಭ್ಯಾಗತರನ್ನು ಪರಿಚಯಿಸಿದರು.

0 ಕಾಮೆಂಟ್‌ಗಳು