BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಕೊಲ್ಲೂರು : ಕಳ್ಳಿಯರ ಬಂಧನ!

ದಿನಾಂಕ 04/07/2026 ರಂದು ಫಿರ್ಯಾದುದಾರರಾದ ನಿಮಿಶಾ ಹಾಗೂ ಅವರ ಗಂಡ ಪ್ರಜೋಶ್ ದಿನಾಂಕ 05/07/2026 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ದೇವಸ್ಥಾನದ ಒಳಗೆ ದೇವರ ದರ್ಶನ ಮಾಡಿ ದೇವಸ್ಥಾನದ ಹೊರಾಂಗಣಕ್ಕೆ ಬಂದಾಗ ಸುಮಾರು 8.20 ಗಂಟೆ ಸಮಯಕ್ಕೆ ಫಿರ್ಯಾದಿದಾರರು ತನ್ನ ಬಳಿ ಇದ್ದ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ ನೋಡಿದಾಗ ಬ್ಯಾಗ್‌ನ ಜಿಪ್‌ ತೆರೆದುಕೊಂಡಿದ್ದು, ನೋಡಿದಾಗ ಬ್ಯಾಗ್‌ನ ಒಳಗಿದ್ದ 80,000/- ರೂಪಾಯಿಯಷ್ಟು ಹಣವಿದ್ದ ಪರ್ಸ್‌ ಇಲ್ಲದೇ ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ದೇವಸ್ಥಾನದ ಪರಿಸರದಲ್ಲಿ ಹುಡುಕಾಡಿದಲ್ಲಿ ಯಾವುದೇ ಮಾಹಿತಿ ದೊರೆಯದೇ ಇದ್ದು, ವ್ಯಾನಿಟಿ ಬ್ಯಾಗ್ನ ಒಳಗಿದ್ದ ಪರ್ಸ್‌ನಲ್ಲಿದ್ದ 80,000/- ರೂಪಾಯಿ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಬಗ್ಗೆ ನಿಮಿಶಾ ಎಂಬುವವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 43/2026 ಕಲಂ : 303 (2) BNS ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. 

ಈ ಬಗ್ಗೆ H.D ಕುಲಕುರ್ಣಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮತ್ತು ಶಿವಕುಮಾರ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತರವರ ನಿರ್ದೇಶನದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ.ಎಂ. ಕೊರ್ಲಹಳ್ಳಿ, ತನಿಖಾ ಪಿ ಎಸ್‌ ಐ ರವರರಾದ ಭಿಮಶಂಕರ್‌, ಹೆಚ್.ಸಿ ರತ್ನಾಕರ, ಪಿಸಿ ಸಂತೋಷ, ಕುಂದಾಪುರ ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ಘನಶ್ಯಾಮ್‌, ಮಹೆಚ್‌ಸಿ ಪದ್ಮಾವತಿ ಹಾಗೂ ಬೈಂದೂರು ಠಾಣೆಯ ಎಹೆಚ್‌ಸಿ ಚಂದ್ರ ಶೇಖರ ರವರುಗಳು CCTV ಕ್ಯಾಮರಾ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯಾದ 1) ನೇತ್ರಾವತಿ(33), ಗಂಡ: ನಿಂಗೇಶ್ ವಾಸ: ಹೊಸಮನೆ, 4ನೇ ಕ್ರಾಸ್, ಭದ್ರಾವತಿ ಶಿವಮೊಗ್ಗ ಜಿಲ್ಲೆ, 2) ಶಾರದ(50), ಗಂಡ: ದಿ, ದುರ್ಗಪ್ಪ, ವಾಸ: 1ನೇ ತಿರುವು ಉಡುಗಲಮ್ಮ ದೇವಸ್ಥಾನ ಹತ್ತಿರ, ಭೋವಿ ಕಾಲೋನಿ ಭದ್ರಾವತಿ, ಶಿವಮೊಗ್ಗ ಜಿಲ್ಲೆ, ಮತ್ತು 3) ದುರ್ಗಮ್ಮ(44), ಗಂಡ: ಅಶೋಕ, ವಾಸ: ಉಡಗಲಮ್ಮ ದೇವಸ್ಥಾನದ ಹತ್ತಿರ, ಹೊಸ ಭೋವಿ ಕಾಲೋನಿ, ಭದ್ರಾವತಿ ಶಿವಮೊಗ್ಗ ಜಿಲ್ಲೆರವರನ್ನು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮಾನ್ಯ ಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. 

ಈ ಆರೋಪಿತರಲ್ಲಿ ದುರ್ಗಮ್ಮಎಂಬುವರ ಮೇಲೆ ಒಟ್ಟು 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, 1 ಪ್ರಕರಣ ಲಸ್ಕರ್‌ ಪೊಲೀಸ್‌ ಠಾಣೆ ಮೈಸೂರು ಹಾಗೂ ಓಲ್ಡ್‌ ಟೌನ್‌ ಪೊಲೀಸ್‌ ಠಾಣೆ ಭದ್ರಾವತಿಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ. 

ಶಾರದ ಎನ್ನುವ ಆರೋಪಿತೆಯ ವಿರುಧ್ದ ಬೆಂಗಳೂರು ನಗರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು ಮತ್ತು ಅಶೋಕಪುರಂ ಪೊಲೀಸ್‌ ಠಾಣೆ ಮೈಸೂರು ಠಾಣೆಯಲ್ಲಿ 1 ಕಳ್ಳತನ ಪ್ರಕರಣ, ಒಟ್ಟು 3 ಪ್ರಕರಣಗಳು ದಾಖಲಾಗಿರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!