ಬ್ರಹ್ಮಾವರ: ಬಾಕೂ೯ರು ಹನೆಹಳ್ಳಿ ಶ್ರೀ ಕೋಟಿ ಚೆನ್ನಯ ಸೈನಿಕ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯ ದಾಸ್ ನೆರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಯಂಟ್ಸ್ ಫೆಡರೇಶನ್ ಪೂರ್ವ ಅಧ್ಯಕ್ಷ ಮಧುಸೂದನ್ ಹೇರೂರು ನಮ್ಮ ಸೈನಿಕರ ತ್ಯಾಗ ಮತ್ತು ಹೋರಾಟಗಾರರ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ಬಂದಿದೆ ವಿಶ್ವದ ಹಲವಾರು ದೇಶಗಳಲ್ಲಿ ಇಂದಿಗೂ ಜನರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇಲ್ಲ ಆದರೆ ನಮ್ಮ ದೇಶದಲ್ಲಿ ಪ್ರಜೆಗಳಿಗೆ ಎಲ್ಲಾ ರೀತಿಯ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ತಿಳಿಸಲಾಗಿದೆ. ನಮ್ಮ ಸ್ವಾತಂತ್ರ್ಯವನ್ನು ನಾವೆಲ್ಲರೂ ಕೂಡ ಉತ್ತಮವಾಗಿ ಆಚರಣೆ ಮಾಡಬೇಕು ಎಂದರು.
ಜಯಂಟ್ಸ್ ಸದಸ್ಯ ಮತ್ತು ತರಬೇತುದಾರ ರಾಘವೇಂದ್ರ ಪ್ರಭು ಕವಾ೯ಲು, ಕೇವಲ ವರ್ಷದಲ್ಲಿ ಒಂದು ಬಾರಿ ನಮ್ಮ ಸ್ವಾತಂತ್ರವನ್ನು ನೆನಪು ಮಾಡಿದರೆ ಸಾಲದು ದಿನಂಪ್ರತಿ ನಮ್ಮ ಹೋರಾಟಗಾರರಿಗೆ ಕೃತಜ್ಞತೆ ಅರ್ಪಿಸಬೇಕಾಗಿದೆ ಸ್ವಾತಂತ್ರ್ಯೋತ್ಸವ ನಮ್ಮ ಮನೆಯ ಹಬ್ಬವಾಗಬೇಕು ಎಂದರು.
ವೇದಿಕೆಯಲ್ಲಿ ಜಯಂಟ್ಸ್ ಯೂನಿಟ್ ಡೈರೆಕ್ಟರ್ ಸುಂದರ ಪೂಜಾರಿ ಮುಡುಕುಕ್ಕುಡೆ, ಕಾರ್ಯದರ್ಶಿ ಮಿಲ್ಟನ್ ಒಲಿವೇರ, ಬಾಕೂ೯ರು ಗಣೇಶ್ ಮಾಸ್ತಿ ನಗರ, ಸೈನಿಕ ಶಾಲೆಯ ಮುಖ್ಯ ತರಬೇತುದಾರ ಸುಬೇದಾರ್ ಜನಾರ್ಧನ್, ಲ್ಯಾನ್ಸ್ ನಾಯಕ್ ಕೃಷ್ಣಪ್ಪ, ಹವಲ್ದಾರ್ ರಾಜೀವ್ ಮತ್ತು ಸೈನಿಕ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು.
ಜಯಂಟ್ಸ್ ಪೂರ್ವ ಅಧ್ಯಕ್ಷ ವಿವೇಕಾನಂದ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
