BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಬಲಾದ ಹಣದ ಆರೋಪಿಗಳ ಬಂಧನ

 

ಪಿರ್ಯಾದಿದಾರರಿಗೆ ದಿನಾಂಕ; 02/07/2026 ರಂದು ಮೊ ನಂ 9338503148 ಸಂಜೆ 6:30 ಗಂಟೆಗೆ ಒಂದು ವಾಟ್ಸ್ ಕರೆ ಬಂದಿದ್ದು, ಸದ್ರಿ ಕರೆಯನ್ನು ಸ್ವೀಕರಿಸಲಾಗಿ ವ್ಯಕ್ತಿ ಹಿಂದಿ ಬಾಷೆಯಲ್ಲಿ, ನೀವು ಅಜಿತ್ ಪಾಡಿಯಾ‌ರವರ ತಂದೆಯಾ? ಎಂಬುದಾಗಿ ಕೇಳಿ ಅಜಿತ್ ಪಡಿಯಾ‌ ನಮ್ಮ ಬಳಿ ವಜ್ರದ ವ್ಯವಹಾರ ಮಾಡಿದ್ದು, ಸದ್ರಿ ವಜ್ರದ ಬಾಬು ಹಣವನ್ನು ಬಾಕಿ ಇಟ್ಟಿದ್ದು ಅದರಲ್ಲಿ ಬಾಕಿ ಇರುವ 5 ಲಕ್ಷ ರೂವನ್ನು ನೀವು ಕೊಡಬೇಕು ಎಂದು ಪಿರ್ಯಾದುದಾರರಿಗೆತಿಳಿಸಿದರು. 

ಪಿರ್ಯಾದುದಾರರು ತನ್ನ ಮಗ ಅಜಿತ್‌ ಪಡಿಯಾರ್ ಎಂಟು ವರ್ಷದ ಹಿಂದ ತೀರಿಹೋಗಿದ್ದು, ಈ ಬಗ್ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ, ಆದ್ದರಿಂದ ಹಣ ಕೊಡಲು ಆಗುವುದಿಲ್ಲ ಎಂಬುದಾಗಿ ತಿಳಿಸಿದರು. ಸದ್ರಿ ಕರೆಯು 966576550765 ರಿಂದ ಬಂದಿರುತ್ತದೆ. ನಂತರ ದಿನಾಂಕ: 02/07/2026 ರಂದು ಬೆಳಿಗ್ಗೆ ದುಬಾಯಿಯಲ್ಲಿರುವ ಪಿರ್ಯಾದುದಾರರ 2 ನೇ ಮಗ ಅಮೀತ್ ಕೂಡ ಪೋನ್ ಕರೆ ಮಾಡಿ ತನ್ನ ದುಬಾಯಿ ಫೋನ್ ನಂಬರಿಗೆ 0528310018ನೇದಕ್ಕೆ ವಾಟ್ಸ್ ಕರೆ ಮಾಡಿ ಅಣ್ಣ, ಅಜೀತನ ಬಾಬು ಬಾಕಿ 5 ಲಕ್ಷ ರೂ ಕೊಡಬೇಕು ಇಲ್ಲದಿದ್ದರೆ ಊರಿನಲ್ಲಿರುವ ಹೆಂಡತಿ ರಕ್ಷಾಳಿಗೆ ತೊಂದರೆ ನೀಡುವುದಾಗಿ ಬೆದರಿಸಿ ಹಣವನ್ನು ಕೊಡುವಂತೆ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ. 

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಕ್ರನಂ: 82/2026, ಕಲಂ:308(1)(E)351(4)BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಮೇಲಾಧಿಕಾರಿಯವರ ಆದೇಶದಂತೆ ಉಡುಪಿ ನಗರ ಠಾಣಾ ಪೊಲೀಸ್‌ ನಿರೀಕ್ಷಕರು ಶ್ರೀ ಮಹೇಶ ಪ್ರಸಾದ್.ಪಿ ಮಾರ್ಗದರ್ಶನದಲ್ಲಿ, ಠಾಣೆಯ ಪೊಲೀಸ್‌ ಉಪನಿರೀಕ್ಷಕ ತನಿಖೆ-2 ರತ್ನಾಕರ ಕೆ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಪ್ರಕರಣದ ಆರೋಪಿಗಳಾದ 1) ಸಾಜೀದ್ ತಂದೆ: ಅಬ್ದುಲ್ ಶುಕೂರ್, ವಾಸ: ಜಾನ್ ಅರ್ಕ ಅಪಾರ್ಟಮೆಂಟ್, ಮನೆ ನಂ : 202, ಸಂತೋಷ್ ನಗರ, ಕುಕ್ಕುಂಜೆ, ಪರೆಂಪಳ್ಳಿ ರಸ್ತೆ, ಶಿವಳ್ಳಿ, ಗ್ರಾಮ ತಂದೆ: 2) ಸೈಯದ್ ಸೈಫ್ ಅಹಮ್ಮದ್ ( 40) ತಂದೆ: ಸೈಯದ್ ಅಲ್ತಾಫ್ ಅಹಮ್ಮದ್, ವಾಸ: ಹುತ್ರಿದುರ್ಗಾ ಹೋಬಳಿ, ಕೆಂಪನಳ್ಳಿ, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ, ದಿನಾಂಕ: 20/07/2026 ರಂದು ಹಾಗೂ 26/08/2026 ರಂದು ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಆರೋಪಿ ಸೈಯದ್ ಸೈಫ್ ಅಹಮ್ಮದ್ ಈತನನ್ನು ಪೊಲೀಸ್ ಅಭಿರಕ್ಷೆಯಲಿ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ.

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಹರಿರಾಮ್‌ಶಂಕರ್ ಐಪಿಎಸ್‌ ಉಡುಪಿ ಜಿಲೆರವರ ನಿರ್ದೇಶನದಂತೆ, ಶ್ರೀ ಸುಧಾಕರ್ ನಾಯ್ಕ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಬೆಳ್ಳಿಯಪ್ಪ . ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್‌ ನಿರೀಕ್ಷಕರು ಶ್ರೀ. ಮಹೇಶ ಪ್ರಸಾದ್.ಪಿ, ನೇತೃತ್ವದಲ್ಲಿ, ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಉಡುಪಿ ನಗರ ಪೊಲೀಸ್‌ಠಾಣಾ ಪಿಎಸ್‌ಐ ರತ್ನಾಕರ ಕೆ, ಠಾಣಾ ಸಿಬ್ಬಂದಿಯವರಾದ ಪ್ರಸನ್ನ.ಸಿ,ಜೀವನ್‌ ಕುಮಾರ್, ಮಣಿಪಾಲ ಠಾಣೆಯ ಮಲ,ಯ ಹಿರೇಮ‌, ಹೇಮಂತ್‌ಕುಮಾರ್‌ ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿಯವರು ಸಹಕರಿಸಿರುತ್ತಾರೆ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!