BREAKING
ಅಂತರಾಷ್ಟ್ರೀಯ

ಬೆಂಗಳೂರಿನಲ್ಲಿ 'ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027'

'ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್' (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಪ್ರತಿಷ್ಠಿತ 'ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027'ಗೆ ಆತಿಥ್ಯ ವಹಿಸಲಿದೆ. 2027ರ ಏಪ್ರಿಲ್ 20ರಿಂದ 22ರವರೆಗೆ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.  

ಏಷ್ಯಾ ಮತ್ತು ವಿಶ್ವದಾದ್ಯಂತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಬದಲಾಗುತ್ತಿರುವ ಆದ್ಯತೆಗಳ ಕುರಿತು ಚರ್ಚಿಸಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ವಿಶ್ವವಿದ್ಯಾಲಯಗಳ ನಾಯಕರು, ವಿದ್ವಾಂಸರು, ನೀತಿ ನಿರೂಪಕರು, ಸಂಶೋಧಕರು ಮತ್ತು ಉದ್ಯಮ ರಂಗದ ಪ್ರತಿನಿಧಿಗಳಿಗೆ ಈ ಶೃಂಗಸಭೆಯು ಒಂದು ಪ್ರಮುಖ ವೇದಿಕೆಯಾಗಲಿದೆ. 

2027ರ ಶೃಂಗಸಭೆಯು “ಪ್ರತಿಭೆ, ಪರಿವರ್ತನೆ ಮತ್ತು ವಿಸ್ತಾರ: ವಿಸ್ತರಣೆಯ ಯುಗದಲ್ಲಿ ನಾಯಕತ್ವ” ಎಂಬ ವಿಷಯದಡಿ ನಡೆಯಲಿದೆ. ಉನ್ನತ ಶಿಕ್ಷಣದ ಹಾದಿಯಲ್ಲಿನ ಅವಕಾಶ ಮತ್ತು ಸವಾಲುಗಳಾದ ಪ್ರತಿಭಾ ಅಭಿವೃದ್ಧಿ, ತಾಂತ್ರಿಕ ಬದಲಾವಣೆ, ಅಂತಾರಾಷ್ಟ್ರೀಕರಣ, ಸಂಶೋಧನೆ ಮತ್ತು ಆವಿಷ್ಕಾರದ ಜತೆಗೆ ಜನಸಂಖ್ಯಾ ಪಲ್ಲಟ ಮತ್ತು ಹವಾಮಾನ ಬದಲಾವಣೆ ಕುರಿತು ಗಣ್ಯರು ಇಲ್ಲಿ ಬೆಳಕು ಚೆಲ್ಲಲಿದ್ದಾರೆ. 

ಈ ಶೃಂಗಸಭೆಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, 'ದಿ ಏಷ್ಯಾ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ 2027'ರ ಪಟ್ಟಿಯನ್ನು ವೇದಿಕೆಯ ಮೇಲೆ ನೇರವಾಗಿ ಪ್ರಕಟಿಸುವುದು. ಇದರೊಂದಿಗೆ 'ದಿ ಏಷ್ಯಾ ಅವಾರ್ಡ್ಸ್ 2027'ರ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಏಷ್ಯಾ ವಲಯದಾದ್ಯಂತ ಇರುವ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಗಣ್ಯರನ್ನು ಈ ವೇದಿಕೆಯು ಒಂದೆಡೆ ಸೇರಿಸಲಿದೆ. 

ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, "ಭಾರತದಲ್ಲಿ 'ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ'ಯನ್ನು ಆಯೋಜಿಸುತ್ತಿರುವುದು, ಜಾಗತಿಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ದೇಶದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ. ನಮ್ಮ ಬೆಂಗಳೂರು ಕ್ಯಾಂಪಸ್‌ನಲ್ಲಿ ಈ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸುತ್ತಿರುವುದಕ್ಕೆ ಹಾಗೂ ಏಷ್ಯಾದಾದ್ಯಂತ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ಸಂಶೋಧನಾ ವಲಯದ ಭವಿಷ್ಯವನ್ನು ರೂಪಿಸಬಲ್ಲ ಮಹತ್ವದ ಚರ್ಚೆಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ಮಾಹೆ ಹೆಮ್ಮೆಪಡುತ್ತದೆ," ಎಂದು ಹರ್ಷ ವ್ಯಕ್ತಪಡಿಸಿದರು. 

ಶೃಂಗಸಭೆಯ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, "ಮಾಹೆ ಬೆಂಗಳೂರಿನಲ್ಲಿ 'ಟಿಎಚ್‌ಇ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027' ಆಯೋಜಿಸುತ್ತಿರುವುದು, ಏಷ್ಯಾದಲ್ಲಿ ಉನ್ನತ ಶಿಕ್ಷಣದ ಭವಿಷ್ಯದ ಕುರಿತು ಅರ್ಥಪೂರ್ಣ ಸಂವಾದವನ್ನು ಉತ್ತೇಜಿಸಲು ದೊರೆತ ಒಂದು ಮಹತ್ವದ ಅವಕಾಶವಾಗಿದೆ. ಈ ಶೃಂಗಸಭೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಎಲ್ಲಾ ಗಣ್ಯರನ್ನು ಬೆಂಗಳೂರಿಗೆ ಸ್ವಾಗತಿಸಲು ಮತ್ತು ಜ್ಞಾನ ವಿನಿಮಯ, ಸಹಯೋಗ ಹಾಗೂ ನಾವೀನ್ಯತೆಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಲು ಮಾಹೆ ಕಾತುರದಿಂದ ಕಾಯುತ್ತಿದೆ," ಎಂದು ತಿಳಿಸಿದರು. 

ಈ ಶೃಂಗಸಭೆಯು ಮಾಹೆ ಬೆಂಗಳೂರಿನ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪರಿಸರವನ್ನು ಅನಾವರಣಗೊಳಿಸಲಿದೆ. ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳಲು ಇದೊಂದು ಮಹತ್ವದ ವೇದಿಕೆಯಾಗಲಿದೆ. 


ಕಾರ್ಯಕ್ರಮದ ವಿವರಗಳು: 

ಕಾರ್ಯಕ್ರಮ: ಟೈಮ್ಸ್ ಹೈಯರ್ ಎಜುಕೇಶನ್ (THE) ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027 

ದಿನಾಂಕ: 20–22 ಏಪ್ರಿಲ್ 2027 

ಸ್ಥಳ: ಮಾಹೆ ಕ್ಯಾಂಪಸ್, ಗೋವಿಂದಪುರ, ಯಲಹಂಕ, ಬೆಂಗಳೂರು 

ವಿಷಯ: ಪ್ರತಿಭೆ, ಪರಿವರ್ತನೆ ಮತ್ತು ವಿಸ್ತಾರ: ವಿಸ್ತರಣೆಯ ಯುಗದಲ್ಲಿ ನಾಯಕತ್ವ   

ಆತಿಥ್ಯ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) 

ಆಯೋಜಕರು: ಟೈಮ್ಸ್ ಹೈಯರ್ ಎಜುಕೇಶನ್ (THE) 

 

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: 

https://shorturl.at/oOQRi  


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:  

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.   


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!