ಖ್ಯಾತ ಛಾಯಾಚಿತ್ರ ಕಲಾವಿದ ಗುರುದತ್ ಕಾಮತ್ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರು ಕಳೆದ ಒಂದು ವಾರಗಳಿಂದ ಕಿಡ್ನಿ ವೈಫಲ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.
ಬಹುಮುಖ ಪ್ರತಿಭೆಯ ಛಾಯಾಚಿತ್ರ ಕಲಾವಿದರಾದ ಕಾಮತ್ ರವರ ಗರಡಿಯಲ್ಲಿ ಹಲವಾರು ಛಾಯಾಚಿತ್ರ ಕಲಾವಿದರು ನೆಲೆಕಂಡಿಕೊಂಡಿದ್ದಾರೆ. ಛಾಯಾಗ್ರಹಣ ಕಾರ್ಯಾಗಾರವನ್ನು ಛಾಯಾ ಗ್ರಾಹಕರಿಗೋಸ್ಕರ ನಿರಂತರ ನಡೆಸುತಿದ್ದರು.
ತಮ್ಮ ಕೈಚಳಕದ ಛಾಯಾಚಿತ್ರಗಳಿಗೆ ದೇಶ ವಿದೇಶಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಶಿರೂರು ಶ್ರೀಗಳ ಪರ್ಯಾಯದ ಸಮಯದಲ್ಲಿ ದಿನ ನಿತ್ಯವೂ ಶ್ರೀ ಕೃಷ್ಣ ಪರಮಾತ್ಮನ ಅಲಂಕಾರದ ಛಾಯಾಚಿತ್ರ ಗಳನ್ನು ಹಾಗೂ ಶ್ರೀ ಕೃಷ್ಣ ಮಠದ ಎಲ್ಲಾ ಉತ್ಸವದ, ಹಬ್ಬ ಹರಿ ದಿನಗಳ ಛಾಯಾ ಚಿತ್ರ ಗಳನ್ನು ಭಗದ್ಭಕ್ತರಿಗೆ ತಲುಪಿಸುತ್ತಿದ್ದ ಶ್ರೀ ಕೃಷ್ಣ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಉಡುಪಿ ಶಾಸಕ ಯಶ್ ಪಾಲ ಸುವರ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.