ಜೇಸಿಐ ಉಡುಪಿ ಸಿಟಿ ಘಟಕವು ಜೇಸಿಐ ವಲಯ 15 ರ ವತಿಯಿಂದ ಶಂಕರಪುರದಲ್ಲಿ ನಡೆದ ವಲಯದ ಪ್ರಥಮ ತರಬೇತಿ ಸಮ್ಮೇಳನ ಇನ್ಸ್ಪಾಯರ್ - 2024 ರಲ್ಲಿ ಅತ್ಯುತ್ತಮ ಹೊಸ ತರಬೇತುದಾರ ಪುರಸ್ಕಾರ ಸಹಿತ ವಿವಿಧ ಪ್ರಶಸ್ತಿಗೆ ಭಾಜನವಾಗಿದೆ.
ಜೇಸಿ ಶಂಕರಪುರದಲ್ಲಿ ಸಹ ಆತಿಥ್ಯದಲ್ಲಿ ನಡೆದ ಸಮ್ಮೇಳನದಲ್ಲಿ ತರಬೇತಿ ವಿಭಾಗದಲ್ಲಿ ಟಾಪ್ - 4, ಪರಿಣಾಮಕಾರಿ ಭಾಷಣದಲ್ಲಿ ದ್ವಿತೀಯ, ಬ್ಲ್ಯಾನರ್ ಅನಾವರಣದಲ್ಲಿ ದ್ವಿತೀಯ, ತರಬೇತಿ ವಿಭಾಗದಲ್ಲಿ 7 ಮನ್ನಣೆ ಸಹಿತ ವಿವಿಧ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವಲಯಾಧ್ಯಕ್ಷ ಗಿರೀಶ್ ಎಸ್ .ಪಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದಭ೯ದಲ್ಲಿ ತರಬೇತಿ ವಿಭಾಗದ ನಿದೇ೯ಶಕಿ ಹೇಮಲತಾ ಪ್ರದೀಪ್, ವಲಯಾಡಳಿತ ಮಂಡಳಿ ಸದಸ್ಯರು, ಉಡುಪಿ ಸಿಟಿ ಅಧ್ಯಕ್ಷೆ ಡಾ.ಹರೀಣಾಕ್ಷಿ ಕಕೇ೯ರ, ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಸ್ಮಿತಾ ಪಾಟೀಲ್ , ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.