Header Ads Widget

ಶೀರೂರು ಪರ್ಯಾಯದ ಚಪ್ಪರ ಮುಹೂರ್ತ

ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಮಹಾ ಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ಕೃಷ್ಣ ಮಠದ ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳ ಬಳಿಕ ಚಪ್ಪರ ಮುಹೂರ್ತ ನಡೆಯುತ್ತದೆ. ಈ ಮೂಲಕ ಪರ್ಯಾಯದ ಅತಿಥಿ ಸತ್ಕಾರ , ಅನ್ನ ಸಂತರ್ಪಣೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಈ ಎಲ್ಲಾ‌ ಕಾರ್ಯಕ್ರಮಗಳಿಗೆ ಮೊದಲ ಕಾರ್ಯಕ್ರಮವಾಗಿ ಚಪ್ಪರ ಮುಹೂರ್ತ ನಡೆಸಲಾಗುತ್ತದೆ.

ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿತು. ಕೃಷ್ಣಮಠದ ಪಾರ್ಕಿಂಗ್ ಬಳಿ ವಿದ್ಯೋದಯ ಶಾಲೆಯ ಹಿಂಭಾಗದ ಪ್ರದೇಶದಲ್ಲಿ ಸುದರ್ಶನ್ ಭಟ್ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ , ಕಾರ್ಯದರ್ಶಿ ಮೋಹನ್ ಭಟ್ , ಸಂಚಾಲಕ ಸುಪ್ರಸಾದ್ ಶೆಟ್ಟಿ, ಶ್ರೀಕಾಂತ್ ನಾಯಕ್ , ರಾಜೇಶ್ ರಾವ್ , ಪದ್ಮ ರತ್ನಾಕರ್, ವೀಣಾ ಎಸ್ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್ , ವಿಷ್ಣು ಪ್ರಸಾದ್ ಪಾಡೀಗಾರ್, ಮಠದ ಕೊಟ್ಟಾರಿ ಸದಾಶಿವ ಎಂ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು