ದಿನಾಂಕ: 01/09/2024 ರಂದು ಬೆಳಗ್ಗಿನ ಜಾವ 02.15 ಗಂಟೆ ಸುಮಾರಿಗೆ ಮಣಿಪಾಲ ಠಾಣಾ ವ್ಯಾಪ್ತಿಯ ಅನಂತನಗರ ಎಂಬಲ್ಲಿರುವ ಹಿಂದುಳಿದ ವರ್ಗದವರ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಅಪರಾಧ ಮಾಡುವ ಉದ್ದೇಶದಿಂದ ಸದ್ರಿ ಹಾಸ್ಟಲ್ ಗೆ ಅಕ್ರಮ ಪ್ರವೇಶ ಮಾಡಿ ಕೊಠಡಿಯಲ್ಲಿ ಕಿಟಕಿಯಿಂದ ಕೈಹಾಕಿ ಕಿಟಕಿಯ ಬಳಿ ಮಂಚದಲ್ಲಿ ಮಲಗಿಕೊಂಡಿದ್ದ ಓರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 214/2024 ಕಲಂ. 329(3) 74 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ
ಈ ಪ್ರಕರಣದಲ್ಲಿ ಆರೋಪಿಯ ಪತ್ತೆ ಬಗ್ಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ದೇವರಾಜ್.ಟಿ.ವಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರಾಘವೇಂದ್ರ, ಪಿ.ಎಸ್.ಐ ಅಕ್ಷಯ ಕುಮಾರಿ, ಎ.ಎಸ್.ಐ ವಿವೇಕ್, ಇಮ್ರಾನ್, ಪ್ರಸನ್ನ, ರಘು, ಮಂಜುನಾಥ ಹಾಗೂ ಜ್ಯೋತಿರವರ ತಂಡ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಆರೋಪಿ ನವೀನ್ ನಾಯ್ಕ್ (22), ಶಿವಳ್ಳಿ ಗ್ರಾಮ ಈತನನ್ನು ವಶಕ್ಕೆ ಪಡೆದಿರುತ್ತಾರೆ.
ಆರೋಪಿಯ ವಿಚಾರಣೆಯಲ್ಲಿ ನವೀನ್ ನಾಯ್ಕ್ ನು 2023 ರಲ್ಲಿ ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಗಲಾಟೆ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.