ಪಿರ್ಯಾದಿದಾರರಾದ ಜಯ ಶೆಟ್ಟಿ, ಬೆಳ್ಮಣ್, ರವರ ಮಗ ಪ್ರಶಾಂತ್ ಶೆಟ್ಟಿ ಎಂಬವರು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಯೂನಿಯನ್ ಬ್ಯಾಂಕ್ ಬೆಳ್ಮಣ್ ಶಾಖೆಯಲ್ಲಿ ಎರಡು ಖಾತೆಯನ್ನು ಹೊಂದಿರುತ್ತಾರೆ. ಸದ್ರಿ ಎರಡು ಖಾತೆಗಳಲ್ಲಿ Paytm ಆನ್‌ಲೈನ್ ಪೆಮೆಂಟ್ ಸಿಸ್ಟ್ಂ ಅನ್ನು ಹೊಂದಿದ್ದು, ದಿನಾಂಕ: 10.02.2024 ರಿಂದ ದಿನಾಂಕ: 20.02.2024 ರ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮಗನ ಗಮನಕ್ಕೆ ಬಾರದೇ ಯಾರೋ ಅಪರಿಚಿತರು ಆನ್‌ಲೈನ್ ಮುಖೇನಾ ಮೇಲಿನ ಎರಡು ಖಾತೆಗಳಿಂದ ಹಂತ ಹಂತವಾಗಿ ಒಟ್ಟು ರೂ. 1,56,100/- ವನ್ನು ವರ್ಗಾಯಿಸಿಕೊಂಡು ನಷ್ಠ ಉಂಟುಮಾಡಿರುತ್ತಾರೆ. ಈ ಬಗ್ಗೆ ಜಯ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 17/24 ಕಲಂ. 66 (ಡಿ) ಐ.ಟಿ. ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದ ಎಎಸ್‌ಐ ಉಮೇಶ್ ಜೋಗಿ ಮತ್ತು ಸಿಬ್ಬಂದಿ ನಿಲೇಶ್ ರವರ ತಂಡ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ವಿಶಾಲ್ ಕೋನಪಾಲ(30) ತಂದೆ: ತುಳಸಿ ರಾವ್ ಕೊನಪಾಲ, ಗಂಜಮ್ ಜಿಲ್ಲೆ, ಒಡಿಶಾ ರಾಜ್ಯ ಎಂಬವನನ್ನು ಪತ್ತೆ ಹಚ್ಚಿ, ಆತನಿಂದ ಸದ್ರಿ ಪ್ರಕರಣದಲ್ಲಿ ಬ್ಯಾಂಕ್ ಖಾತೆಗೆ ಜಮೆಗೊಂಡಿರುವ ನಗದು ರೂ 1,56,100 ರೂ. ವನ್ನು ಸ್ವಾಧೀನಪಡಿಸಿ ಕೊಂಡಿರುತ್ತಾರೆ.