ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥಶ್ರೀಪಾದರ ಸಂಕಲ್ಪದಂತೆ ಉಡುಪಿಯಲ್ಲಿ ತಮ್ಮ 45 ನೇ ಚಾತುರ್ಮಾಸ್ಯ ವ್ರತವನ್ನು ಸ್ವೀಕರಿಸಿರುವ ಶ್ರೀಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೆಶತೀರ್ಥಶ್ರೀಪಾದರ ಸಪ್ತಶತಿ ಸಂವತ್ಸರದ ಸಂಭ್ರಮದ ನಿಮಿತ್ತವಾಗಿ ವೈಶಿಷ್ಟ್ಯ ಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಮತ್ತು ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿರುವರು.
ಶ್ರೀಭಂಡಾರಕೆರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೆಶತೀರ್ಥಶ್ರೀಪಾದರು ರಚಿಸಿರುವ ಶ್ರೀವಿದ್ಯೇಶವಿಠ್ಠಲಾಂಕಿತ ಕೃತಿಗಳ ಸಾಮೂಹಿಕ ಗಾಯನದ ಜೊತೆಗೆ ಯತಿತ್ರಯರಿಂದ ಕೃತಿಗಳ ವ್ಯಾಖ್ಯಾನವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಭಂಡಾರಕೇರಿ ಶ್ರೀಪಾದರಿಗೆ ಪರ್ಯಾಯ ಶ್ರೀಪುತ್ತಿಗೆ ಸಂಸ್ಥಾನದಿಂದ ಗೌರವಾರ್ಪಣೆಯನ್ನು ಸಲ್ಲಿಸಲಾಗುವುದು.
ದಿನಾಂಕ 13.09.2024 ಶುಕ್ರವಾರದಂದುಸಂಜೆ 4ಕ್ಕೆ ರಾಜಾಂಗಣದಲ್ಲಿ ನಡೆಯುವಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಈ ಮೂಲಕ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ದಿವಾನರು ಅಪೇಕ್ಷಿಸುತ್ತಾರೆ.