Header Ads Widget

3~12, ಅದ್ದೂರಿಯ ಉಡುಪಿ ಉಚ್ಚಿಲ ದಸರಾ-2024

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷ 3ನೇ ಬಾರಿಯ “ಉಡುಪಿ ಉಚ್ಚಿಲ ದಸರಾ-2024" ನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರ- ಸಹಯೋಗದೊಂದಿಗೆ ಶಾಸ್ರೋಕ್ತವಾಗಿ, ಸಾಂಪ್ರದಾಯಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಆಚರಿಸಲು ಸಂಕಲ್ಪ ಮಾಡಲಾಗಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ವನಿಗದಿಯಾದ ಈ ಕಾರ್ಯಕ್ರಮವನ್ನು ನೀತಿಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ನಡೆಸಲಾಗುವುದು. 


ವಿದ್ಯುದ್ದೀಪಾಲಂಕಾರ ಉದ್ಘಾಟನೆ: ದಿನಾಂಕ:02-10-2024ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಪ್ರಾಯೋಜಕರು: ಡಾ| ಕೆ. ಪ್ರಕಾಶ್ ಶೆಟ್ಟಿ (ಅಧ್ಯಕ್ಷರು MRG ಗ್ರೂಪ್)


• ಅಕ್ಟೋಬರ್ 3, ಗುರುವಾರ ಬೆಳಗ್ಗೆ ಘಂಟೆ 10.00ಕ್ಕೆ ಸರಿಯಾಗಿ ದಸರಾ ಉತ್ಸವದ ಉದ್ಘಾಟನೆಯು ಗಣ್ಯರು, ದಾನಿಗಳ, ಉಪಸ್ಥಿತಿಯಲ್ಲಿ ನಡೆಯಲಿದೆ.

• ದಸರಾ ಪ್ರಯುಕ್ತ ಆಯೋಜಿಸಿರುವ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನದ ಉದ್ಘಾಟನೆಯು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

• ಬೆಳಿಗ್ಗೆ, ಗಂಟೆ 10.45 ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು.

ಅಕ್ಟೋಬರ್ 3ರಿಂದ 12ರವರೆಗೆ “ಉಡುಪಿ ಉಚ್ಚಿಲ ದಸರಾ-2024" ರ ಪ್ರಯುಕ್ತ ಪ್ರತೀದಿನ ನಡೆಯುವ ಧಾರ್ಮಿಕ ಕಾರ್ಯ ಕ್ರಮಗಳು:

• ಚಂಡಿಕಾಹೋಮ, • ಕಲ್ಪೋಕ್ತ ಪೂಜೆ, •ಅನ್ನಸಂತರ್ಪಣೆ, • ಸಂಜೆಯ ಉಪಾಹಾರ, • ಧಾರ್ಮಿಕ ಸಭೆ, •ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ. 

ಪ್ರತೀದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು- • ಸ್ಥಳೀಯ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ

• ವಿವಿಧ ವೃತ್ತಿಪರ ತಂಡಗಳಿಂದ ಜಾದೂ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಜಾನಪದ ನೃತ್ಯ, ನೃತ್ಯ ರೂಪಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
•"ಸಾಮೂಹಿಕ ಕುಣಿತ ಭಜನೆ: ಕರಾವಳಿ ಜಿಲ್ಲೆಗಳ 40 ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಕುಣಿತ ಭಜನೆ.
•ಸಾಮೂಹಿಕ ದಾಂಡಿಯಾ ನೃತ್ಯ : ದಾಂಡಿಯಾ ನೃತ್ಯ ಕಲಾವಿದರು ಹಾಗೂ ಸಾರ್ವಜನಿಕರಿಂದ ರಥಬೀದಿಯ ಸುತ್ತ ಸಾಮೂಹಿಕ ದಾಂಡಿಯಾ ನೃತ್ಯ ಕಾರ್ಯಕ್ರಮ.
• ಶತವೀಣಾವಲ್ಲರಿ : ಏಕಕಾಲದಲ್ಲಿ 101 ವೀಣೆಗಳ ವಾದನ ಕಾರ್ಯಕ್ರಮ.
•ಲೇಸರ್ ಶೋ : ಪ್ರತೀದಿನ ರಾತ್ರಿ ಗಂಟೆ 8.00ರಿಂದ ದಸರಾ ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ ಮಹತ್ವದ ಬಗ್ಗೆ ವಿಶೇಷ ಲೇಸರ್ ಶೋ ನಡೆಯಲಿದೆ.


• ಡೋನ್ ಮೂಲಕ ಮಷ್ಪಾರ್ಚನೆ: ನವದುರ್ಗೆಯರಿಗೆ ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದೆ.
•ದಸರಾ ಪ್ರಯುಕ್ತ ನಡೆಯಲಿರುವ ವಿವಿಧ ಸ್ಪರ್ಧೆಗಳು; ನೃತ್ಯ ಸ್ಪರ್ಧೆ, ಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಹೆಣ್ಣುಮಕ್ಕಳ ಹುಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ,ಕುಸ್ತಿ ಸ್ಪರ್ಧೆ, ದೇಹದಾಡ್ಯ ಸ್ಪರ್ಧೆ,


ಶೋಭಾಯಾತ್ರೆ: ಅಕ್ಟೋಬರ್ 12, ಶನಿವಾರ, ಅಪರಾಹ್ನ ಗಂಟೆ 3.00 • ಶ್ರೀ ಕ್ಷೇತ್ರದಿಂದ ಶೋಭಾಯಾತ್ರೆಯು ಹೊರಡುವ ಮಾರ್ಗ : ರಾಷ್ಟ್ರೀಯ ಹೆದ್ದಾರಿ -66 ಮೂಲಕ ಶ್ರೀ ಕ್ಷೇತ್ರ ಉಚ್ಚಿಲ- ಎರ್ಮಾಳ್- ಉಚ್ಚಿಲ-ಮೂಳೂರು-ಕಾಪು ಬೀಚ್ (ದೀಪಸ್ತಂಭ).


ಈ ಸಂದರ್ಭ ಕಾಪು ದೀಪಸ್ತಂಭದ ಬಳಿ ಬೋಟುಗಳಿಂದ ಸಮುದ್ರ ಮಧ್ಯೆ ಭವ್ಯವಾದ ವಿದ್ಯುದ್ದೀಪಾಲಂಕಾರ, ಲೇಸರ್ ಶೋ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಅರ್ಚಕರಿಂದ ನವದುರ್ಗೆಯರು, ಶಾರದಾಮಾತ ಹಾಗೂ ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

• ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ವಿದ್ಯುದ್ದೀಪ ಹಾಗೂ ತಳಿರು ತೋರಣಗಳಿಂದ ತಮ್ಮ ಮನೆ, ಅಂಗಡಿ, ಮಳಗೆಗಳಗೆ ಜಾತಿ-ಮತ-ಧರ್ಮಗಳ ಬೇಧಭಾವವಿಲ್ಲದೆ ಕಳೆದ ಬಾರಿಯಂತೆ ಈ ಬಾರಿಯೂ ಶೃಂಗರಿಸುವಂತೆ ವಿನಂತಿ ಸುತ್ತೇವೆ.

• ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಂದರ್ಶನ ಮಾಡಲು ಬರುವ ಭಕ್ತಾದಿಗಳಿಗೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ, ಸುಲಭವಾಗಿ ದೇವರ ದರ್ಶನ ಮಾಡಲು ಅವಕಾಶ, ಮಹಾ ಅನ್ನಸಂತರ್ಪಣೆ ಕಾರ್ಯಕ್ಕೆ ಸಹಕರಿಸಲು ದಿನಂಪ್ರತಿ 1500 ಸ್ವಯಂಸೇವಕರು, ಸೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ. ಹಾಗಾಗಿ 10 ದಿನಗಳ ಕಾಲವೂ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಧ್ಯಮದ ಮೂಲಕ ಎಂದು ಡಾ. ಜಿ. ಶಂಕ‌ರ್ ವಿನಂತಿಸಿದ್ದಾರೆ 


ಪತ್ರಿಕಾಗೋಷ್ಠಿಯಲ್ಲಿ ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಚ್ಚಿಲ ದೇವಳ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷ ಮೋಹನ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಕೋಟ್ಯಾನ್, ಜೊತೆ ಕಾರ್ಯದರ್ಶಿ ಶಿಜಿತ್ ಸಾಲ್ಯಾನ್, ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಇದ್ದರು.