ಉಡುಪಿಯ ಹೆಸರಾಂತ ಮೊಬೈಲ್ ರೀಟೇಲರ್ಸ್, ಇಮೇಜ್ ಮೊಬೈಲ್ಸ್ ಉಡುಪಿಯ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣ ರೀತಿಯಲ್ಲಿ, ವಿಭಿನ್ನವಾಗಿ ಉಡುಪಿಯ ಶಾಖೆಯಲ್ಲಿ ಆಚರಿಸಲಾಯಿತು.
ಸಂಸ್ಥೆಯು 8ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಈ ಶುಭಸಮಾರಂಭದಲ್ಲಿ, 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಹಾಗು ದೇಶಕ್ಕೆ ಕೀರ್ತಿ ತಂದಿರುವ ಕಟಪಾಡಿಯ ಶ್ರೀ ಬಸವರಾಜ್ ಅವರಿಗೆ ನಾಗರೀಕ ಸನ್ಮಾನ ನೀಡುವ ಮೂಲಕ ಅರ್ಥಪೂರ್ಣವಾದ ರೀತಿಯಲ್ಲಿ ಇಮೇಜ್ ಮೊಬೈಲ್ಸ್ ಉಡುಪಿಯ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.


