ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಕೃಷಿ ಇಲಾಖೆ ತೋಟಗಾರಿಕೆ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಆರಂಭಗೊಂಡಿರುವ ಕುರಲ್ ರೈತ ಉತ್ಪಾದಕ ಕಂಪೆನಿ ಹಿರಿಯಡ್ಕ ಇದರ ಮೂರನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 28ರಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಾನಂದ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಶ್ರೀ ಕುದಿ ಶ್ರೀನಿವಾಸ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ 'ತೆಂಗು ಮತ್ತು ಅಡಿಕೆ: ಸಮಗ್ರ ಬೆಳವಣಿಗೆ' ಎಂಬ ವಿಷಯದ ಬಗೆಗೆ ಮಾಹಿತಿ ನೀಡಿದರು.
ಹಿರಿಯ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಮೋಹನ್ ರಾಜ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸರಕಾರದಿಂದ ಸಿಗುವ ಸೌಲಭ್ಯಗಳ ಬಗೆಗೆ ಉಡುಪಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ(PMFME) ಗಳಾದ ಶ್ರೀ ವೆಂಕಟೇಶ್ ನಾಯ್ಕ್ ವಿವರಿಸಿದರು.
2023-24 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಪಡೆದ ರೈತ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ರಾಷ್ಟ್ರಕ್ಕಾಗಿ ಯೋಧರಾಗಿ ದುಡಿದು ನಿವೃತ್ತಿ ಪಡೆದು ಕುರಲ್ ಸಂಸ್ಥೆಯಲ್ಲಿ ಸದಸ್ಯರಾಗಿರುವ ರೈತರನ್ನು ಗೌರವಿಸಲಾಯಿತು.
ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಶೆಟ್ಟಿ ಬೈರಂಪಳ್ಳಿ, ಗೌರವ ಸಲಹೆಗಾರರಾದ ಶ್ರೀ ಎಂ.ಸುಂದರ ಭಂಡಾರಿ ನಿರ್ದೇಶಕರುಗಳಾದ ರೊನಾಲ್ಡ್ ಸಲ್ದಾನ್ಹಾ, ಜಯ ಪೂಜಾರಿ, ಬ್ಯಾಪ್ಟಿಸ್ಟ್ ಡಯಾಸ್, ನಂದ ಕುಮಾರ್ , ಜ್ಯೋತಿ ಡಿಸೋಜಾ, ಪ್ರಜ್ವಲ್ ಮರ್ಣೆ, ಶ್ರೀನಿವಾಸ ಪೂಜಾರಿ , ಲೂಸಿ ಪಿ ಪುರ್ಟಾಡೋ ಮತ್ತು ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.ಚಿರಶ್ರೀ ಪ್ರಾರ್ಥಿಸಿ ಆದರ್ಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.