Header Ads Widget

ಉಡುಪಿ:ಅಪ್ರಾಪ್ತ ಬಾಲಕಿಗೆ ಅನುಚಿತ ಮೊಬೈಲ್ ಸಂದೇಶ ಕಳುಹಿಸಿದ ಇನ್ನಿತರ ಆರೋಪದಡಿ ಫೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮುಂಬೈ ನಲ್ಲಿ ಬಂಧನ

 


ಉಡುಪಿ: ದಿನಾಂಕ:20-06-2025 ನಗರದ ಅಪ್ರಾಪ್ತ ಬಾಲಕಿಯೋರ್ವಳಿಗೆ ಮೊಬೈಲ್ ನಲ್ಲಿ ಅನುಚಿತ ಸಂದೇಶಗಳನ್ನು ಕಳುಹಿಸಿದ್ದಲ್ಲದೆ ಬಾಲಕಿಗೆ ಕಿರುಕುಳ ನೀಡಿದ ಆರೋಪದಡಿ ತಲೆಮರೆಸಿ ಕೊಂಡಿದ್ದ ಇಬ್ಬರು ಆರೋಪಿಗಳಲ್ಲಿ ಪ್ರಮುಖ ಆರೋಪಿ ಗೌತಮ್ ಅಣ್ಣಯ್ಯ ರಾವ್ ರವರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಮುಂಬೈಯಲ್ಲಿ ಬಾರ್ ಒಂದಕ್ಕೆ ಕುಡಿಯಲು ಬಂದಾಗ ಬಂಧಿಸಿದ್ದಾರೆ.


ಇನ್ನೋರ್ವ ಆರೋಪಿ ಹಂಗಳೂರು ಮೂಲದ ಪಾಂಡುರಂಗ ನಾಯ್ಕ ತಲೆಮರೆಸಿ ಕೊಂಡಿದ್ದಾನೆ ಎನ್ನಲಾಗಿದೆ. ಇಂದು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ಹದಿನೈದು ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ


ಈ ಬಗ್ಗೆ ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು