ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ಕರ್ನಾಟಕ, ಭಾರತ ಮತ್ತು ಯುನಿವರ್ಸಿಟಿ ಆಫ್ ನ್ಯೂ ಬ್ರನ್ಸ್‌ವಿಕ್ (ಯುಎನ್‌ಬಿ), ಕೆನಡಾ ಇವುಗಳ ಸಹಯೋಗದಲ್ಲಿ "ಆರೋಗ್ಯದಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ: ಶಿಕ್ಷಣ, ಸಂಶೋಧನೆ ಮತ್ತು ಅಧ್ಯಯನದಲ್ಲಿ ಜಾಗತಿಕ ಸಹಭಾಗಿತ್ವದ ಭವಿಷ್ಯವನ್ನು ಚಿತ್ರಿಸುವುದು" ಎಂಬ ವಿಷಯದ ಕುರಿತಾಗಿ ನಡೆಯುವ ಅಂತರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಜುಲೈ 8 ರಂದು ಕೆ ಎಂ ಸಿ ಮಣಿಪಾಲದ ಡಾ. ಟಿ.ಎಂ.ಎ. ಪೈ ಆಡಿಯೋಟೋರಿಯಂನಲ್ಲಿ ಜರಗಿತು.
ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಯಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಉಪಕುಲಪತಿ, ಲೆ. ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಬಳಿಕ ಮಾತನಾಡಿದ ಅವರು ಆರೋಗ್ಯ ವ್ಯವಸ್ಥೆಗಳಲ್ಲಿ ಅಡೆತಡೆಯನ್ನು ನಿವಾರಿಸುವಲ್ಲಿ ಬಹು ಶಿಸ್ತೀಯ ಸಹಯೋಗದ ಶಕ್ತಿಯನ್ನು ಒತ್ತಿಹೇಳಿದರು. ಈ ಸಂದರ್ಭದಲ್ಲಿ ಅವರು ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಮುನ್ನಡೆಸುವ ಹಾದಿಯಲ್ಲಿ ಡಾ. ಟಿ.ಎಂ.ಎ. ಪೈ ಅವರ ದೂರ ದೃಷ್ಟಿತದ ಕೊಡುಗೆಗಳನ್ನು ಸ್ಮರಿಸಿದರು. ಯುನೈಟೆಡ್ ದೇಶಗಳ ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಹಾಗೂ ವಿದ್ಯಾಭ್ಯಾಸದಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಮಾಹೆಯ ಬದ್ಧತೆ ಹಾಗೂ ಪಾಲ್ಗೊಳ್ಳುವಿಕೆಯನ್ನು ಅವರು ಶ್ಲಾಘಿಸಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಯುನಿವರ್ಸಿಟಿ ಆಫ್ ನ್ಯೂ ಬ್ರನ್ಸ್‌ವಿಕ್ ನಡುವೆ ದೀರ್ಘಕಾಲದ ಪರಿಣಾಮಕಾರಿ ಸಹಭಾಗಿತ್ವವನ್ನೂ ಅವರು ಪ್ರಶಂಸಿಸಿದರು.
ಸಮ್ಮೇಳನದ ಸಹ ಸಂಘಟನಾ ಅಧ್ಯಕ್ಷೆ ಹಾಗೂ ಯುಎನ್‌ಬಿ ನರ್ಸಿಂಗ್ ಫ್ಯಾಕಲ್ಟಿಯ ಡೀನ್ ಡಾ. ಲೋರ್ನಾ ಬಟ್ಲರ್ ಅವರು ಮಾತನಾಡಿ, ಅಂತರಾಷ್ಟ್ರೀಯ ಗಡಿಯ ಆರೋಗ್ಯ ವ್ಯವಸ್ಥೆಗಳಲ್ಲೂ ಸಾಂಸ್ಕೃತಿಕವಾಗಿ ಪ್ರತಿಸ್ಪಂದಿಸುವ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದ ವ್ಯವಸ್ಥೆಗಳ ಅಗತ್ಯವಿದೆ ಎಂದು ಹೇಳಿ ನರ್ಸಿಂಗ್ ನ ಜಾಗತಿಕ ದೃಷ್ಟಿಕೋನದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು.
ಸಮ್ಮೇಳನದ ಸಂಯೋಜಕಿ, ಎಂ ಸಿ ಓ ಎನ್ ಇಲ್ಲಿನ ಫಂಡಮೆಂಟಲ್ ಆಫ್ ನರ್ಸಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿ ಡಾ. ಲಿನು ಸಾರಾ ಜಾರ್ಜ್, ಸಮ್ಮೇಳನದ ಉದ್ದೇಶವನ್ನು ವಿವರಿಸಿ, ಈ ಸಮ್ಮೇಳನವು ಜಾಗತಿಕ ಸಹಭಾಗಿತ್ವ ಮತ್ತು ಸಮಾವೇಶಾತ್ಮಕ ಆರೋಗ್ಯ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗೆ ನಂಬಿಕೆಯುತವಾಗಿರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹೆಯ ಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಅನಂತರ ಅತಿಥಿಗಳಿಂದ ಪರಂಪರಾಗತ ದೀಪಪ್ರಜ್ವಲನ ಕಾರ್ಯಕ್ರಮ ನಡೆಯಿತು. ಸಮ್ಮೇಳನದ ಆಯೋಜನಾ ಅಧ್ಯಕ್ಷೆ ಹಾಗೂ ಎಂಸಿಒಎನ್‌ನ ಡೀನ್ ಡಾ. ಜ್ಯುಡಿತ್ ಎ. ನೋರೋನ್ಹಾ ಸಭೆಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಮ್ಮೇಳನದ ಸಹ ಸಂಯೋಜಕಿ ಎಂಸಿಓಎನ್ ಇಲ್ಲಿನ ಮೂಲತತ್ವಗಳ ವಿಭಾಗದ ಪ್ರಾಧ್ಯಾಪಕಿ ಡಾ. ರಾಧಿಕಾ ಆರ್. ಪೈ, ಅವರು ವಂದಿಸಿದರು.
ಈ ಸಮ್ಮೇಳನವು ಸಂಯುಕ್ತ ರಾಷ್ಟ್ರಗಳ 3ನೇ, 4ನೇ, 5ನೇ, 10ನೇ ಹಾಗೂ 17ನೇ ಸುಸ್ಥಿರ ವಿಕಸನದ ಗುರಿಗಳಾದ — "ಆರೋಗ್ಯ ಮತ್ತು ಯೋಗಕ್ಷೇಮ", "ಗುಣಮಟ್ಟದ ಶಿಕ್ಷಣ", "ಲಿಂಗ ಸಮಾನತೆ", "ಅಸಮಾನತೆಗಳ ಇಲ್ಲದಾಗಿಸುವಿಕೆ" ಮತ್ತು "ಸಹಭಾಗಿತ್ವ ಗುರಿಗಳು" — ಮೊದಲಾದ ಉದ್ದೇಶಗಳನ್ನು ಹೊಂದಿದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉಪನ್ಯಾಸಗಳಿಂದ ಉಪನ್ಯಾಸ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು. ವಿಜ್ಞಾನ ಪ್ರಬಂಧ ಹಾಗೂ ಪೋಸ್ಟರ್ ಪ್ರದರ್ಶನಗಳು ನಡೆಯುತ್ತಿವೆ. ಎರಡು ದಿನಗಳ ಸಮ್ಮೇಳನದಲ್ಲಿ ಭಾರತದಿಂದ ಮತ್ತು ವಿದೇಶಗಳಿಂದ 230ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ವಿದ್ವತ್ತುಪೂರ್ಣ ಚರ್ಚೆಗಳು, ಉಪನ್ಯಾಸಗಳು ಮತ್ತು ವೈಚಾರಿಕ ಪ್ರತಿಪಾದನೆಗಳು ಮುಂದುವರೆಯಲಿವೆ.ಜುಲೈ7 ರಂದು ಈ ಸಮ್ಮೇಳನದ ಪೂರ್ವಭಾವಿಯಾಗಿ ಮಿಶ್ರ ವಿಧಾನ ಸಂಶೋಧನೆಯ ಕುರಿತು ಪೂರ್ವಸಮ್ಮೇಳನ ಕಾರ್ಯಾಗಾರ ನಡೆಯಿತು.
ಈ ಸಮ್ಮೇಳನದ ಅಂಗವಾಗಿ ಡಾ. ಅಪರ್ಣಾ ಭದುರಿಯವರ ಸ್ಮರಣಾರ್ಥ ನಡೆದ "ಆರೋಗ್ಯ ಶಿಕ್ಷಣ, ಸಂಶೋಧನೆ ಮತ್ತು ಅಧ್ಯಯನದಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು" ಎಂಬ ಉಪನ್ಯಾಸವನ್ನು ಎಂಸಿಓಎನ್, ಮಾಹೆಯ ಸಂಶೋಧನೆ ಮತ್ತು ಸಹಯೋಗದ ವಿಭಾಗದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿ ಮತ್ತು ಮಾಜಿ ಡೀನ್ ಡಾ. ಅನೀಸ್ ಜಾರ್ಜ್, ನೀಡಿದರು. ಈ ಉಪನ್ಯಾಸವನ್ನು ಡಾ. ವಿಷ್ಣು ರೆಂಜಿತ್, ಕಾರ್ಯಕ್ರಮ ನಿರ್ದೇಶಕರು ಹಾಗೂ ಉಪನ್ಯಾಸಕರು ಸ್ಕೂಲ್ ಆಫ್ ನರ್ಸಿಂಗ್ ಮತ್ತು ಮಿಡ್ ವೈಫರಿ, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಇವರು ನಿರ್ವಹಿಸಿದರು.
ಈ ಉಪನ್ಯಾಸವು ಕೂಡ ಸಂಯುಕ್ತ ರಾಷ್ಟ್ರಗಳ ಸುಸ್ಥಿರ ವಿಕಸನ ಗುರಿಗಳಾದ “ಆರೋಗ್ಯ ಮತ್ತು ಯೋಗಕ್ಷೇಮ”, “ಗುಣಮಟ್ಟದ ಶಿಕ್ಷಣ”, “ಲಿಂಗ ಸಮಾನತೆ”, “ಅಸಮಾನತೆ ಇಲ್ಲದಾಗಿಸುವಿಕೆ” ಮತ್ತು “ ಸಹಭಾಗಿತ್ವ ಗುರಿಗಳು” ಮೊದಲಾದ ವುಗಳನ್ನು ಪ್ರೋತ್ಸಾಹಿಸುತ್ತದೆ.
0 ಕಾಮೆಂಟ್‌ಗಳು