Header Ads Widget

ಪರೀಕ : ದನಕಳ್ಳರ ಬಂಧನ!

ದಿನಾಂಕ: 30/07/2025 ರಂದು ಹಿರಿಯಡಕ ಠಾಣಾ ಪಿ.ಎಸ್.ಐ ತನಿಖೆ ವಿಠಲ ಮಲವಾಡಕರ್‌ರವರಿಗೆ ಆತ್ರಾಡಿ ಪರೀಕ ಎಂಬಲ್ಲಿ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ತೆಗೆದುಕೊಂಡು ಹೋಗುವ ಬಗ್ಗೆ ದೊರೆತ ಮಾಹಿತಿಯಂತೆ ಮಧ್ಯಾಹ್ನ ಸುಮಾರು 12:00 ಗಂಟೆಗೆ ಆತ್ರಾಡಿ ಗ್ರಾಮದ ಪರೀಕ ಶಿವಗುಂಡಿ ಎಂಬಲ್ಲಿಗೆ ಹೋಗಿ ನೋಡಲಾಗಿ ಒಂದು ಪಿಕಪ್‌ ವಾಹನದಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಹಿಂಸೆಯಾಗುವ ರೀತಿಯಲ್ಲಿ ತುಂಬಿಸುತ್ತಿರುವುದು ಕಂಡು ಬಂದಿರುತ್ತದೆ. ಆರೋಪಿಗಳಾದ 1) ಮೆಹಬೂಬ್‌ ಸಾಹೇಬ್‌(65) ತಂದೆ:ಗೌಸ್‌ ಸಾಹೇಬ್‌, ವಾಸ: ಸರಕಾರಿ ಗುಡ್ಡೆ 9 ನೇ ಕ್ರಾಸ್‌ 2 ನೇ ಮನೆ ಮೂಡಬೆಟ್ಟು ಗ್ರಾಮ ಕಾಪು ತಾಲೂಕು , 2) ಪದ್ಮನಾಭ(57) ತಂದೆ:ಮೌನಪ್ಪ ವಾಸ: ಕುಕ್ಕೆ ಸುಬ್ರಮಣ್ಯ ಹೊಸಹೊಳಿಕೆ ಗ್ರಾಮ ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರನ್ನು ದಸ್ತಗಿರಿ ಮಾಡಿ ಅವರು ಕೃತ್ಯಕ್ಕೆ ಬಳಸಿದ್ದ KA 07 5094 ನೇ ಪಿಕಪ್‌ ವಾಹನ (ಅಂದಾಜು ಮೌಲ್ಯ 6 ಲಕ್ಷ ರೂ) ಹಾಗೂ ಒಂದು ದನ ಹಾಗೂ 1 ಕರು (ಅಂದಾಜು ಮೌಲ್ಯ 6 ಸಾವಿರ ರೂ )ವನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳ ವಿರುದ್ದ ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 53/2025 , ಕಲಂ: 303(2) BNS ಕಲಂ: 11 (1)(ಡಿ) ಪ್ರಾಣಿ ಹಿಂಸಾ ಪ್ರತಿಭಂಧಕ ಕಾಯ್ದೆ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂದಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಹರಿರಾಮ್‌ ಶಂಕರ್‌ ಐಪಿಎಸ್‌ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಸುಧಾಕರ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು.ಡಿ.ಟಿ, ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಗೋಪಿಕೃಷ್ಣ ನೇತೃತ್ವದಲ್ಲಿ , ಪುನಿತ್‌ ಕುಮಾರ್‌ ಬಿ.ಈ ಪಿ.ಎಸ್.ಐ (ಕಾ.ಸು). ವಿಠಲ್ ಮಲವಾಡಕರ್‌ ಪಿ.ಎಸ್.ಐ(ತನಿಖೆ) ಹಾಗೂ ಹಿರಿಯಡಕ ಪೊಲೀಸ್‌ ಠಾಣಾ ಸಿಬ್ಬಂಧಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು