Header Ads Widget

ಸೆಪ್ಟೆಂಬರ್ 6, 7 ರಂದು ದುಬೈಯಲ್ಲಿ ಅಂತರಾಷ್ಟ್ರೀಯ ಜಾನಪದ ಉತ್ಸವ

ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಉದ್ಘಾಟನಾ ಸಂದರ್ಭದಲ್ಲಿ, ಕರ್ನಾ ಟಕದ ಜಾನಪದ ಪ್ರಕಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶ ದಿಂದ "ಅಂತರಾಷ್ಟ್ರೀಯ ಜಾನಪದ ಉತ್ಸವ ವನ್ನು 2025 ಸೆಪ್ಟೆಂಬರ್ 6 ಮತ್ತು 7 ರಂದು, ರಾಮಿಡ್ರಿಮ್ಸ್, ಪಂಚತಾರಾ ಹೋಟೆಲ್ ಸಭಾಂಗಣ. ಬ್ಯುಸಿನೆಸ್ ಬೇ, ದುಬೈ. ಯು.ಎ.ಇ. ಇಲ್ಲಿ ಆಯೋಜಿಸಲಾಗಿದೆ​. 



ರಾಜ್ಯದ ಹತ್ತಕ್ಕೂ ಹೆಚ್ಚು ಜಾನಪದ ತಂಡಗಳನ್ನು ದುಬಾಯಿಗೆ ಆಮಂತ್ರಿಸಿ, ಜಗತ್ತಿನ ನಾನಾ ರಾಷ್ಟ್ರಗಳ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನ ನೀಡಿ, ನಾಡಿನ ಸಂಸ್ಕೃತಿಗೆ ಹೊಸ ದಿಕ್ಕು ನೀಡುವ ಹಬ್ಬ ಈ ಜಾನಪದ ಉತ್ಸವ ಎಂದು  ಅಂತಾರಾಷ್ಟ್ರೀಯ ಜಾನಪದ ಉತ್ಸವ ಸಮಿತಿಯ ನಿರ್ದೇಶಕ  ​ಹಾಗು ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ​ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.



ಈ ಉತ್ಸವದಲ್ಲಿ ಕರಾವಳಿಯ ಕಂಗಿಲು, ಹುಲಿ ಕುಣಿತ, ಮರಾಠಿ ಹೋಲಿ ನೃತ್ಯ, ಯಕ್ಷಗಾನ ಗೊಂಬೆಯಾಟ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಡೊಳ್ಳು ಕುಣಿತ, ಸೋಲಿಗರ ನೃತ್ಯ, ಕಂಸಾಳೆ ಮೊದಲಾದ ತಂಡಗಳು ಪ್ರದರ್ಶನ ನೀಡಲಿವೆ. 


ಈ ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಹೆಚ್. ಆಂಜನೇಯ, ಡಾ. ಮೋಹನ್ ಆಳ್ವ, ಪ್ರೊ. ರಾಧಾಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಉಪಸ್ಥಿತ ರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಯುಎಇ ಘಟಕದ ಅಧ್ಯಕ್ಷ ಸಾದನ್ ದಾಸ್ ವಹಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಕೊಡಗಿನ ರಾಣಿ ಮಾಚಯ್ಯ ಹಾಗೂ ಮೈಸೂರಿನ ಮಳವಳ್ಳಿ ಮಹದೇವ ಇವರಿಗೆ 'ಎಚ್.ಎಲ್. ನಾಗೇಗೌಡ ಜಾನಪದ ಪ್ರಶಸ್ತಿ' ನೀಡಲಾಗುವುದು. ಹಿರಿಯ ಕಲಾಪೋಷಕ ರಾಮೀ ಹೋಟೆಲ್ ಸಮೂಹದ ಪ್ರವರ್ತಕ ವರದರಾಜ್ ಶೆಟ್ಟಿಯವರಿಗೆ 'ಕನ್ನಡ ಕಲಾಪೋಷಕ' ಬಿರುದು ನೀಡಿ ಸನ್ಮಾನಿಸ ಲಾಗುವುದು.



ಈ ಉತ್ಸವದಲ್ಲಿ ವಿವಿಧ ದೇಶಗಳ 2000ಕ್ಕೂ ಪ್ರತಿನಿಧಿಗಳು ಭಾಗವಹಿಸಲಿದ್ದು, ಜಾನಪದ ಪ್ರದರ್ಶನಗಳ ಜೊತೆಗೆ ವಿವಿಧ ವಿಚಾರಗೋಷ್ಠಿಗಳು, ಕಲಾಕೃತಿಗಳ ಪ್ರದರ್ಶನ, ವಸ್ತು ಪ್ರದರ್ಶನ ಕೂಡಾ ನಡೆಯಲಿದೆ. ರಾಜ್ಯದ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. 



ಈ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಭಾಗಶ: ಅನುದಾನ ಮಾತ್ರೆ ಬಿಡುಗಡೆ ಆಗಿರುವುದರಿಂದ, ಉತ್ಸವದ ಯಶಸ್ಸಿಗಾಗಿ ಅನೇಕ ಪ್ರಾಯೋಜಕರು, ದಾನಿಗಳು ಬಹುತೇಕ ತಂಡಗಳನ್ನು ಪ್ರಾಯೋಜನೆ ಮಾಡುತ್ತಿದ್ದು, ಮೊದಲ ಬಾರಿಗೆ ಜಾನಪದ ಪ್ರಕಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ನಿರ್ಮಾಣ ಆಗಿದೆ ಎಂದು ಸಂಘಟ ಕರು ವಿವರಿಸಿದರು.

​ಈ ಸಂದರ್ಭದಲ್ಲಿ  ಅಂತರಾಷ್ಟ್ರೀಯ ಜಾನಪದ ಉತ್ಸವ​ದ  ​ಸ್ಥಳೀಯ್ ಸಂಚಾಲಕ ಪ್ರಶಾಂತ್ ಆಚಾರ್ಯ ಮತ್ತು ರಂಗನಟಿ ಕಾವ್ಯವಾಣಿ ಕೊಡಗು ಉಪಸ್ಥಿತರಿದ್ದರು.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು