Header Ads Widget

ಅತ್ಯುತ್ತಮವಾಗಿ ಮೂಡಿಬಂದ "ಹೆಜ್ಜೆ ಗೆಜ್ಜೆ" ನೂಪುರ ಝೇಂಕಾರ

ಹೆಜ್ಜೆ ಗೆಜ್ಜೆ ಉಡುಪಿ ಮಣಿಪಾಲ (ರಿ)ಇವರ ಸಂಯೋಜನೆಯಲ್ಲಿ ಐವೈಸಿ ಇನ್ಫೋಸಿಸ್ ಯಕ್ಷಗಾನ ಕಲಾರಂಗ ಉಡುಪಿಯ ಸಭಾಂಗಣದಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣರವರು ವಿಶೇಷವಾಗಿ ಸಂಯೋಜಿಸಿದ ಹೆಜ್ಜೆ ಗೆಜ್ಜೆ ಪ್ರೊಡಕ್ಷನ್ಸ್ ನ ನೂತನ ಭರತನಾಟ್ಯ ನೃತ್ಯಬಂಧ ಗಳನ್ನೊಳಗೊಂಡ ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಯಕ್ಷಗಾನ ಕಲಾರಂಗ(ರಿ) ಉಡುಪಿ ಕಾರ್ಯದರ್ಶಿ ಗಳಾದ ಶ್ರೀಯುತ ಮುರಳಿ ಕಡೆಕಾರ್ , ಸನಾತನ ನಾಟ್ಯಾಲಯದ ಹಿರಿಯ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ , ಭರತನಾಟ್ಯ ಕಲಾವಿದ, ವಿದ್ವಾನ್ ಮಂಜುನಾಥ ಎನ್ ಪುತ್ತೂರು ಮತ್ತು ಸಮಾಜ ಸೇವಾ ಧುರೀಣ ಡಾ. ಶರಣಬಸವ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಜ್ಜೆ ಹೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣರವರು ವಹಿಸಿದ್ದರು. 

ಹೆಜ್ಜೆ ಗೆಜ್ಜೆಯ 23 ಕಲಾವಿದರು ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ಹೆಜ್ಜೆ ಗೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ ಸ್ವಾಗತಿಸಿದರು. ಸಂಚಾಲಕರಾದ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು