ಉಡುಪಿ: ನಗರದ ಆದರ್ಶ ಆಸ್ಪತ್ರೆಯ ಹೃದಯ ಚಿಕಿತ್ಸಾ ವಿಭಾಗದ ನೂತನ ಸೌಲಭ್ಯಕ್ಕೆ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆ.28ರಂದು ಚಾಲನೆ ನೀಡಲಿದ್ದಾರೆ. ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ರೋಗಿಗಳ ಸೇವೆಗೆ ಲಭ್ಯರಿರುತ್ತಾರೆ.
ಡಾ.ಸುಹಾಸ್ ಅವರು ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದು, ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ವಿವಿಗೆ ಒಳಪಟ್ಟ ಕೆಂಪೇಗೌಡ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ರಾಮಯ್ಯ ಕಾಲೇಜಿನ ಕಾರ್ಡಿಯಾಲಜಿ ವಿಭಾಗದಲ್ಲಿ ಡಿಎಂ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಹಿರಿಯ ಹೃದ್ರೋಗ ತಜ್ಞ ಡಾ.ಸೂರ್ಯಪ್ರಕಾಶ್ ರಾವ್ ಅವರ ಹೈದರಾಬಾದ್ ನಲ್ಲಿರುವ ಇಂಡೋ ಜಪಾನೀಸ್ ಸಿಟಿಒ ಕ್ಲಬ್‌ನಲ್ಲಿ ತರಬೇತಿ ಪಡೆಯುವ ಮೂಲಕ ಹೃದ್ರೋಗ ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣತಿ ಗಳಿಸಿದ್ದಾರೆ. ಕ್ಲಿಷ್ಟಕರ ಕೊರೊನರಿ ಇಂಟರ್ವೆನ್ನನ್‌ನಲ್ಲಿ ತರಬೇತಿ ಪಡೆದಿದ್ದು, ಕಾರ್ಡಿಯಾಲಜಿ ವಿಭಾಗದ ಆಂಜಿಯೋಪ್ಲಾಸ್ಟಿ, ಪೆರಿಫೆರಲ್ ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದ ವಿವಿಧ ರೀತಿಯ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
ಇವರು ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಮತ್ತು ಸಿಇಒ ವಿಮಲಾ ಚಂದ್ರಶೇಖರ್ ದಂಪತಿ ಪುತ್ರ.
ಅತ್ಯಾಧುನಿಕ ಸೌಲಭ್ಯ: ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯ ಮೂಲಕ ಗುರುತಿಸಿಕೊಂಡಿರುವ ಆದರ್ಶ ಆಸ್ಪತ್ರೆಯು 200 ಬೆಡ್‌ಗಳ ಸಾಮರ್ಥ್ಯ ಹೊಂದಿದೆ. ಇಎನ್‌ಟಿ, ಆಸ್ಪತ್ರೆಯು ಅತ್ಯಾಧುನಿಕ ಸಿಟಿ ಸ್ಕ್ಯಾನ್, ఎంఆరోఐ, ఫిలిప్సో ఇండియా లిమిటిడో ಕಂಪನಿಯ ಆಧುನಿಕ ಕ್ಯಾಥ್ ಲ್ಯಾಬ್ ಹೊಂದಿದ್ದು, ಆಸ್ಪತ್ರೆ ಮೂರು ಮೊಡ್ಯೂಲಾರ್ ಆಪರೇಷನ್ ಥಿಯೇಟರ್ ಸಹಿತ ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳಾದ ಬೈನ್, ಸೈನ್, ಲ್ಯಾಪ್ರೋಸ್ಕೋಪಿಕ್, ಎಂಡೋಸ್ಕೋಪಿಕ್, ಆರ್ಥೋಪೆಡಿಕ್, ಜನರಲ್ ಸರ್ಜರಿ, 25 ಹಾಸಿಗೆಗಳ ಸಂಪೂರ್ಣ ಹವಾನಿಯಂತ್ರಿತ ತೀವ್ರ ನಿಗಾ ಘಟಕ.
ಸುಸಜ್ಜಿತ ಹವಾನಿಯಂತ್ರಿತ ಹೆರಿಗೆ ಕೊಠಡಿ, ನವಜಾತ ಹಾಗೂ ಮಕ್ಕಳ ತೀವ್ರ ನಿಗಾ ಘಟಕ ಮತ್ತು ವಿವಿಧ ವಿಭಾಗದ ಪರಿಣತ ತಜ್ಞ ವೈದ್ಯರು ಸೇವೆಗೆ ಸದಾ ಸಿದ್ಧರಿದ್ದಾರೆ. ಈಗಾಗಲೇ ಹೃದ್ರೋಗ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀಕಾಂತ್ ಕೆ. ಹಾಗೂ ಡಾ.ವಿಶುಕುಮಾರ್ ಬಿ. ಅವರೊಂದಿಗೆ ಡಾ.ಸುಹಾಸ್ ಸೇವೆ ಸಲ್ಲಿಸಲಿದ್ದಾರೆ. ನರರೋಗ ತಜ್ಞ ವೈದ್ಯರು ಮಿದುಳಿನ ರಕ್ತನಾಳ ಅನ್ಯೂರಿಸಂ ಕ್ಲಿಪಿಂಗ್ ಹಾಗೂ ಕಾಯ್ಲಿಂಗ್ ಚಿಕಿತ್ಸೆಯನ್ನೂ ನೀಡಲಿದ್ದಾರೆ ಎಂದು ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಹಾಗೂ ಸಿಇಒ ವಿಮಲಾ ಚಂದ್ರಶೇಖರ್ ತಿಳಿಸಿದ್ದಾರೆ.
0 ಕಾಮೆಂಟ್‌ಗಳು