ಸಂಸ್ಕಾರ ಉಳ್ಳ ಭಾಷೆಯೇ ಸಂಸ್ಕೃತ ಭಾಷೆ. ಸಂಸ್ಕಾರಯುಕ್ತನಾಗಿದ್ದು ಭಾಷೆಯ ಪ್ರಯೋಗವನ್ನು ಸರಿಯಾಗಿ ಸ್ಪಷ್ಟವಾಗಿ ಮಾಡಿದರೆ ಆಗ ವ್ಯಕ್ತಿಯು ಜೀವನದಲ್ಲೂ ಯಶಸ್ಸನ್ನು ಗಳಿಸುವನು. ಅಕ್ಕಿಯು ಸಂಸ್ಕಾರದಿಂದ ಹೇಗೆ ಅನ್ನವಾಗುತ್ತದೋ ಹಾಗೆಯೆ ಭಾಷೆಯ ಸಂಸ್ಕಾರದ ರೂಪವೇ ಸಂಸ್ಕೃತ.
ಸಂಸ್ಕೃತ ಮತ್ತು ಸಂಸ್ಕೃತಿ ಈ ಎರಡೂ ಮಾನವನಿಗೆ ಅಗತ್ಯ. ಸಂಸ್ಕೃತಿಯುಕ್ತ ದಿನಾಚರಣೆ ಸಂಸ್ಕೃತ ದಿನಾ ಚರಣೆ ಆಗಬೇಕು. ಆಗ ಶಾಶ್ವತವಾದ ಈ ಭಾಷೆಯನ್ನು ಸುಸಂಸ್ಕೃತರಾಗಿ ಅಧ್ಯಯನ ಮಾಡಿದರೆ ನಮಗೆ ಸಮೃದ್ಧ ಜೀವನಮಾಡಲು ಸಾಧ್ಯ. ಆದ್ದರಿಂದ ಎಲ್ಲರೂ ಸಂಸ್ಕೃತದ ಅಧ್ಯಯನವನ್ನು ಮಾಡಿ, ಪ್ರತಿದಿನವೂ ಸಂಸ್ಕೃತೋತ್ಸವವನ್ನು ಆಚರಿಸಿದರೆ ಉತ್ತಮ ಎಂದು ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀ ಪಾದರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮ ದಲ್ಲಿ ಅನುಗ್ರಹ ಸಂದೇಶವನ್ನಿತ್ತರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಉಡುಪಿ ಎಸ್ ಎಮ್ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ವಿದ್ವಾನ್ ಶ್ರೀ ಅಜಿತ್ ಕುಮಾರ್ ಆಚಾರ್ಯರು ಇವರು ಸಂಸ್ಕೃತ , ಸಂಸ್ಕೃತಿ ಗಳು ಪರಸ್ಪರ ಸಂಬಂಧ ಹೊಂದಿರುವ ಪದಗಳು. ಹಾಗಾಗಿ ಸಂಸ್ಕೃತ ಬಲ್ಲವರು ಸುಸಂಸ್ಕೃತರು. ವೇದಗಳಲ್ಲಿ ಭಾಷೆಯನ್ನು ವಾಕ್, ವಾಣಿ ಎಂದು ಸಂಬೋಧಿಸಲಾಗಿದೆ. ಅರ್ಥಾತ್ ಸಂಸ್ಕಾರಗೊಂಡ ಭಾಷೆ ಎಂದು ನಿರೂಪಿತವಾಗಿದೆ. ಹೀಗೆ ಭಾಷೆಯಿಂದ ಪುರುಷ ರೂಪುಗೊಳ್ಳುವನು. ಈ ಕಾರಣಕ್ಕಾಗಿ ನರ ಮತ್ತು ಪ್ರಾಣಿಗಳಿಗೆ ವ್ಯತ್ಯಾಸವಿದೆ ಎಂದು ಹಲವು ಬಗೆಯಲ್ಲಿ ಸಂಸ್ಕೃತದ ಸೊಬಗನ್ನು ತಿಳಿಸಿದರು. ಇಂತಹ ಸಂಸ್ಕೃತ ದಿನಾಚರಣೆ ಅತ್ಯಗತ್ಯ ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ರಾಮು ಎಲ್ ಇವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಅತ್ಯಧಿಕ ಅಂಕಗಳಿಸಿದ ಕಾಲೇ ಜಿನ ವಿದ್ಯಾರ್ಥಿಗಳಿಗೆ ಹಾಗೆಯೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸಂಸ್ಕೃತ ನಿರ್ದೇಶ ನಾಲಯದವರು ನಡೆಸಿದ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ನೀಡ ಲಾಯಿತು.
ಕಾಲೇಜಿನ IQAC ಸಂಯೋಜಕರಾದ ಡಾ. ವಿನಯ್ ಕುಮಾರ್, ಸಂಸ್ಕೃತ ಉಪನ್ಯಾಸಕ ಶ್ರೀಯುತ ಅಶ್ವಿನ್ ಇವರು ಕಾರ್ಯಕ್ರಮ ದಲ್ಲಿ ಉಪಸ್ಥಿತ ರಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ ರಮೇಶ ಟಿ.ಎಸ್ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ಡಾ. ಆನಂದ ಆಚಾರ್ಯ ಇವರು ವಿದ್ಯಾರ್ಥಿಗಳ ಪಾರಿತೋಷಕ ಪಟ್ಟಿಯನ್ನು ವಾಚಿಸಿ ದರು. ವಿದ್ಯಾರ್ಥಿಗಳಾದ ಅವನೀ ಹಾಗೂ ಭಾರ್ಗವಿ ಸಂಸ್ಕೃತ ಗೀತ ಗಾಯನ ವನ್ನು ಮಾಡಿದರು.
ವಿದ್ಯಾರ್ಥಿನಿ ಕು. ಕೀರ್ತನಾ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕು. ರಾಜರಾಜೇಶ್ವರಿ ಇವರು ಧನ್ಯವಾದ ವಿತ್ತರು.
0 ಕಾಮೆಂಟ್‌ಗಳು