Header Ads Widget

ಕಾಸರಗೋಡು ಗಡಿನಾಡ ಧೀರೆ ದಿ. ತೊಟ್ಟೆತ್ತೋಡಿ ಪ್ರೇಮ ಕೆ.ಭಟ್ ಇವರಿಗೆ ನುಡಿನಮನ, ಪುಷ್ಪ ನಮನ ಹಾಗೂ ಸಂಗೀತ ಸಮರ್ಪಣೆ

ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ 1.8.2025 ಶುಕ್ರವಾರದಂದು ಗಡಿನಾಡ ಧೀರೆ ದಿ. ತೊಟ್ಟೆತ್ತೋಡಿ ಪ್ರೇಮ ಕೆ.ಭಟ್ ಇವರಿಗೆ ನುಡಿನಮನ, ಪುಷ್ಪ ನಮನ ಹಾಗೂ ಸಂಗೀತ ಸಮರ್ಪಣೆಯ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಜರುಗಿತು. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ಗಣಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ರಾಜಾರಾಮ ಮೀಯಪದವು, ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶನಾರಾಯಣ, ಡಾ.ಚಂದ್ರಶೇಖರ್ ನುಡಿನಮನ ಸಲ್ಲಿಸಿದರು. ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು ಮೈಸೂರಿನ ವಿದ್ವಾನ್ ಎನ್.ಆರ್.ಪ್ರಶಾಂತ್ ನಡೆಸಿಕೊಟ್ಟರು. ಇವರಿಗೆ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಡಾ.ಉದಯಶಂಕರ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು