Header Ads Widget

ಆದರ್ಶ ಆಸ್ಪತ್ರೆ ಉಡುಪಿ : ಬೃಹತ್ ಉಚಿತ ಹೃದ್ರೋಗ ತಪಾಸಣಾ ಶಿಬಿರ


ಆದರ್ಶ ಆಸ್ಪತ್ರೆ ಉಡುಪಿ ವಿಶ್ವ ಹೃದಯ ದಿನದ ಅಂಗವಾಗಿ  ಹೃದ್ರೋಗ ತಜ್ಞರಾದ ಡಾ | ಶ್ರೀಕಾಂತ ಕೃಷ್ಣ, ಡಾ | ವಿಶು ಕುಮಾರ ಬಿ ಮತ್ತು ಡಾ | ಸುಹಾಸ್ ಜಿ ಸಿ ಇವರ ನೇತೃತ್ವದಲ್ಲಿ ಬೃಹತ್ ಉಚಿತ ಹೃದ್ರೋಗ ತಪಾಸಣಾ ಶಿಬಿರ  ದಿನಾಂಕ :28-09-2025 ನೇ ಭಾನುವಾರಆದರ್ಶ ಆಸ್ಪತ್ರೆ ಉಡುಪಿ ಇಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00ರವರೆಗೆ ಆಯೋಜಿಸಲಾಗಿದೆ. 

ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಹೃದ್ರೋಗ ತಜ್ಞರಿಂದ ಉಚಿತ ತಪಾಸಣೆ, ರಕ್ತದ ಸಕ್ಕರೆ ಅಂಶದ ಪರೀಕ್ಷೆ, ರಕ್ತದ ಕೊಬ್ಬಿನಾoಶದ ಪರೀಕ್ಷೆ ಹಾಗೂ ಇ. ಸಿ. ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಹೃದ್ರೋಗ ತಜ್ಞರ ಸಲಹೆಯ ಮೇರೆಗೆ ಹೃದಯದ ಸ್ಕ್ಯಾನಿಂಗ್ (ECHO) ಟಿ. ಎಂ. ಟಿ ಪರೀಕ್ಷೇಗಳನ್ನು ಉಚಿತವಾಗಿ ಮಾಡಲಾಗುವುದು. ಹೃದಯದ ಆಂಜಿಯೋಗ್ರಾಮ್ ಪರೀಕ್ಷೆಯನ್ನು ಶೇಕಡಾ 20% ರ ರಿಯಾಯಿತಿ ದರದಲ್ಲಿ ಹಾಗೂ ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಶೇ 10% ರ ರಿಯಾಯಿತಿ ದರದಲ್ಲಿ ಮಾಡಲಾಗುವುದು. 

ದಿನಾಂಕ 29-09-2025 ರಿಂದ ದಿನಾಂಕ 11-10-2025 ರವರೆಗೆ ಈ ಕೆಳಗಿನ ಪರೀಕ್ಷೆಗಳನ್ನು ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಮಾಡಲಾಗುವುದು. 

-ಉಚಿತ ಪರೀಕ್ಷೆಗಳು : ರಕ್ತದ ಸಕ್ಕರೆ ಅಂಶ ಪರೀಕ್ಷೆ, ರಕ್ತದ ಕೊಬ್ಬಿನಾoಶದ ಪರೀಕ್ಷೆ ಹಾಗೂ ಇ ಸಿ ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. 

ಹೃದಯದ ಆಂಜಿಯೋಗ್ರಾಮ್ ಪರೀಕ್ಷೆಯನ್ನು ಶೇಕಡಾ 20% ರ ರಿಯಾಯಿತಿ ದರದಲ್ಲಿ ಹಾಗೂ ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಶೇ 10% ರ ರಿಯಾಯಿತಿ ದರದಲ್ಲಿ ಮಾಡಲಾಗುವುದು. 

ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ | ಜಿ. ಎಸ್. ಚಂದ್ರಶೇಖರ್ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು