ಪುತ್ತೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಸುಬ್ರಹ್ಮಣ್ಯ ನಗರದ ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ವಿಷ್ಣುಸಹಸ್ರನಾಮಾವಳಿ ಪಠಣ ಸಹಿತ ಲಕ್ಷ ತುಳಸಿ ಅರ್ಚನೆ ಲಕ್ಷ್ಮೀಶೋಭಾನೆ ಪಠಣ ಮತ್ತು ವಿಷ್ಣುಸಹಸ್ರನಾಮ ಯಾಗ ನಡೆಯಿತು. ಶ್ರೀ ದೇವಳದ ಅರ್ಚಕರಾದ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯ ಹಾಗೂ ಶ್ರೀಕಾಂತ ಉಪಾಧ್ಯ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಮಂಜ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಕಾರ್ಯದರ್ಶಿ ಕೆ. ದುರ್ಗಾ ಪ್ರಸಾದ್ ಭಾರ್ಗವ್, ಕೋಶಾಧಿಕಾರಿ ಹಯವದನ ಭಟ್, ಪುತ್ತೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚಂದ್ರಶೇಖರ್ ಅಡಿಗ, ಕಾರ್ಯದರ್ಶಿ ನಿರಂಜನ್ ಭಟ್, ಕೋಶಾಧಿಕಾರಿ ಕೆ.ಜಿ. ರಾಮಚಂದ್ರರಾವ್, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಉಡುಪ, ಜಿ.ವಿ. ಆಚಾರ್ಯ, ಸುನಿತಾ ಚೈತನ್ಯ, ಶುಭಾ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಚೈತನ್ಯ ಎಂ.ಜಿ., ಜೊತೆ ಕಾರ್ಯದರ್ಶಿಗಳಾದ ರಾಮದಾಸ ಉಡುಪ, ವಿಜಯ್ ಕುಮಾರ್, ಅನುಪಮಾ ವಿ.ಜಿ., ಶ್ರೀಲಕ್ಷ್ಮಿ ಉಪಾಧ್ಯಾಯ, ಜೊತೆ ಕೋಶಾಧಿಕಾರಿ ಶಶಿರೇಖಾ ರಾವ್, ಆಪದ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಶಿ, ಮನೋರಮ ಅಡಿಗ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 250ಕ್ಕೂ ಹೆಚ್ಚು ವಿಪ್ರ ಬಾಂಧವರು ಪಾಲ್ಗೊಂಡಿದ್ದರು.
0 ಕಾಮೆಂಟ್‌ಗಳು