ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ವಿ ವಿಖ್ಯಾತ್ ಭಟ್ ಅವರ ಪೌರೋಹಿತ್ಯದಲ್ಲಿ ನವರಾತ್ರಿಯ ಪ್ರಥಮ ದಿನ ಸೋಮವಾರ ಕದಿರು ಕಟ್ಟುವಿಕೆಯಿಂದ ನವರಾತ್ರಿ ಮಹೋತ್ಸವಕ್ಕೆೆ ಚಾಲನೆ ನೀಡಲಾಯಿತು.
ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆೆ ಕದಿರು ಕಟ್ಟಲಾಯಿತು. ಅನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ ನೆರವೇರಿತು. ಸುಕ್ಷಿತ್ ಮತ್ತು ರಶ್ಮಿ ದಂಪತಿ ಹಾಗೂ ವಿಘ್ನೇಶ್ ಕೊಕ್ಕರ್ಣೆ ಮತ್ತು ಮನೆಯವರಿಂದ ಚಂಡಿಕಾಯಾಗಗಳು, ಶಾಂತಾ ಮತ್ತು ಮನೆಯವರಿಂದ ದುರ್ಗಾ ನಮಸ್ಕಾಾರ ಪೂಜೆ, ಶ್ರೀರಂಗಪೂಜೆ ನೆರವೇರಿತು.
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿವಿಧ ಆರಾಧನೆ, ಪೂಜೆಗಳು ನೆರವೇರಿದವು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾಕಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಮಧ್ಯಾಹ್ನ ಶರಣ್ಯಾ, ಶ್ರೇಷ್ಠಾ, ಶ್ರೇಯಾ ಆಚಾರ್ಯ ಮತ್ತು ವಿ ಸುಮಲತಾ ಅವರ ಶಿಷ್ಯೆೆಯರಿಂದ ಹಾಗೂ ರಾತ್ರಿ ಸ್ವದಾ ಭಟ್ ಅವರಿಂದ ನೃತ್ಯ ಸೇವೆ ಸಮರ್ಪಿಸಿದರು. ನವಶಕ್ತಿ ವೇದಿಕೆಯಲ್ಲಿ ಪ್ರಜ್ಞಾ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ನಡೆಯಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾಾರೆ.
ಕ್ಷೇತ್ರದಲ್ಲಿ ನಿರಂತರವಾಗಿ 10 ದಿನಗಳ ಕಾಲ ನೆರವೇರಲಿರುವ ಅನ್ನಸಂತರ್ಪಣೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ನೆರೆದ ಭಕ್ತರಿಗೆ ಅನ್ನ ಮತ್ತು ಸಾರು ಬಡಿಸುವುದರ ಮೂಲಕ ಚಾಲನೆ ನೀಡಿದರು.
0 ಕಾಮೆಂಟ್‌ಗಳು